MENU

ಮೂಕಹಕ್ಕಿ ಕನ್ನಡ ಸಿನಿಮಾ ಮತ್ತು ಅಲೆಮಾರಿಗಳ ಮೂಕ ರಾಗ …..

ಸ್ಟಾರ್ ಮಗಳ ಸಕ್ಕತ್ ಟಾಕ್…….

December 20, 2017 ಮನರಂಜನೆ, ವಿಡಿಯೋ, ಸಂಗೀತ

ಚಂದನ್ ಶೆಟ್ಟಿ ಜೈಲಿನಲ್ಲಿ….!

ಚಂದನ್ ಶೆಟ್ಟಿ ಜೈಲಿನಲ್ಲಿ….

ಹೆಸರಿಗೆ ಮಾತ್ರ ಅದೊಂದು ಬೃಹತ್ ಅರಮನೆ. ಅಕ್ಷರಶಃ ಅದು ಐಷಾರಾಮಿ ಸೆರೆಮನೆ. ಮೊದಲೇ ಫಿಕ್ಸ್ ಮಾಡಿಕೊಂಡು ಪೂರ್ವ ನಿರ್ಧರಿತ ಬಂಧನಕ್ಕೊಳಗಾಗುವ ಗೃಹಬಂಧಿಗಳ ಕಾರ್ಖಾನೆ. ಇಲ್ಲಿ ಆ ಗೃಹಬಂಧಿಗಳಿಗೆ ರಾಜ ಮರ್ಯಾದೆ. ಅದಕ್ಕೊಬ್ಬ ಒಡೆಯ. ಆತನನ್ನು ಇಲ್ಲಿಯವರೆಗೂ ಕಂಡವರಿಲ್ಲ. ಬರೀ ಆದೇಶವೇ. ಆ ಸೆರೆಮನೆಯೊಳಗೆ ನಡೆವುದೆಲ್ಲವೂ ಮನರಂಜನೆಯೇ ಎಂಬ ಮೂರ್ಖತನ. ಕಿಸ್ ಕೊಟ್ಟರೂ ಮನರಂಜನೆ. ಹೊಡೆದಾಡಿ-ಗುದ್ದಾಡಿದರೂ ಮನರಂಜನೆ. ಅದರೊಳಗೆ ಹೋಗುವವರೆಲ್ಲರೂ ಎಲ್ಲವನ್ನೂ ಮೀರಿದವರೇ. ತಮ್ಮ ವಿಕೃತಿಯನ್ನು ವೈಭವೀಕರಿಸಿ, ಮನೆಯಲ್ಲಿ ಹೇಗಾದರೂ ಉಳಿಯಬೇಕೆಂಬ ತಗಾದೆಯಲ್ಲಿರುವ ಸ್ಪರ್ಧೆಗಳೇ ಇಲ್ಲಿ ಹೆಚ್ಚಾಗಿದ್ದಾರೆ. ವಿಶೇಷವೆಂದರೆ ಪರಪ್ಪನ ಅಗ್ರಹಾರದಲ್ಲಿದ್ದ ಕೆಡುಕು ಮನಸ್ಸಿನ ಸುಪಾರಿ ರೋಗಿಗಳು ಬೇಡಿ ಪಡೆದುಕೊಂಡ ಬೇಲ್‍ಗೆ ಇಲ್ಲಿ ಅವಕಾಶವಿದ್ದರೂ ಸಹ ನಮಗೆ ಬೇಲ್ ಬೇಡ ನಾವು ಈ ಮನೆಯ ಪಾಲಾಗಿ ವಾಲ್‍ನಲ್ಲಿ ನೇತಾಡುತ್ತೇವೆ ಎನ್ನುತ್ತಾ, ಕುಣಿಯುವ ಸ್ಪರ್ಧಿಗಳ ಮಧ್ಯೆಯೊಬ್ಬ ಬರೀ ಮೂರೇ ಪೆಗ್ಗಿಗೆ ಖ್ಯಾತಿಗೊಳಗಾದವನಿದ್ದಾನೆ. ಈತನು ತನ್ನದೇ ಆದ ಸಂಗೀತ ಪ್ರಕಾರದಿಂದ ಎಲ್ಲರ ಮನಗೆದ್ದ ಅಪ್ಪಟ ಕನ್ನಡಿಗ. ಹೇಳಿಕೊಳ್ಳಲು ತೀರಾ ವೈಭವೋಪೇತ ಜೀವನಕ್ಕೆ ಒಗ್ಗದೇ ಬಡತನದ ಬೇಗೆಯಲ್ಲಿಯೂ ಕುಗ್ಗದೇ ಬದುಕು ಕಟ್ಟಿಕೊಳ್ಳಲು ಹೊರಟ ಹರೆಯದ ಯುವಕ. ಹೆಸರು ಚಂದನ್ ಶೆಟ್ಟಿ. ಈ ಹೆಸರನ್ನೂ ಮರೆತರೂ ಮೂರೇ ಮೂರು ಪೆಗ್ಗಿಗೆ ಎಂಬ ವಿಭಿನ್ನ ಶೈಲಿಯ ಕನ್ನಡ ಹಾಗೂ ಇಂಗ್ಲೀಷ್ ಮಿಶ್ರಿತ ಹಾಡನ್ನು ಯಾರೂ ಮರೆತಿರಲಿಕ್ಕಿಲ್ಲ. ಕಿರಿಸ್ಕರಿಂದ ಹಿರಿಸ್ಕರವರೆಗೂ ಒಮ್ಮೆ ತಿರುಗಿ ನೋಡುವಂತೆ ಮಾಡಬಲ್ಲ ಕನ್ನಡ ರ್ಯಾಪ್ ಸಿಂಗರ್ ಇವನು.
ಈತನ ರ್ಯಾಪ್ ಮೋಡಿಗೆ ಎಲ್ಲರೂ ಮನಸೋತವರೇ. ಬಿಗ್ ಬಾಸ್ ಬಂಧಿಯಾದರೂ ಸಿಕ್ಕ ಪರಿಕರಗಳಿಂದ ಮೆಲೋಡಿಯಸ್ ಸಾಂಗನ್ನೋ ರಿದಮ್ಮನ್ನೋ ನುಡಿಸಿ ರಂಜಿಸಬಲ್ಲ ಪ್ರತಿಭೆ. ಕೇವಲ ಪರದೇಶಿ ಭಾಷೆಗಳಿಗೆ ಸೀಮಿತವಾಗಿದ್ದ ರ್ಯಾಪ್ ಸಂಗೀತವನ್ನು ಕನ್ನಡಕ್ಕೂ ಹರಡುವಂತೆ ಮಾಡಿದ ಅನೇಕ ಕನ್ನಡ ರ್ಯಾಪ್ ಸಾಂಗ್‍ಗಳಿಗಿಂತ ಭಿನ್ನ. ಈ ಆಲ್ಬಂ ಪಾಪ್ಯುಲಾರಿಟಿ ಗಳಿಸುವ ಮುಂಚೆ ಈತನ ಎಲ್ಲ ಹಾಡುಗಳು ಅಷ್ಟೇನೂ ಕಿಕ್ ಇಲ್ಲದೇ ಅರೆ ಮತ್ತಿನಲ್ಲಿದ್ದವು. 3 ಪೆಗ್ ಆಲ್ಬಂ ಸಾಂಗ್ ಕಿಕ್ಕ ನೀಡಿದ್ದಲ್ಲದೇ ಗತ್ತು ಗಮ್ಮತ್ತೆಲ್ಲವನ್ನು ಹೆಚ್ಚಿಸಿತು. ವಿಶ್ವದಲ್ಲಿ ಇರುವಂತಹ ಪ್ರಮುಖ ಪಬ್ ಕ್ಲಬ್‍ಗಳಲ್ಲಿ ಪ್ಲೇ ಆದ ಕನ್ನಡ ರ್ಯಾಪ್ ಸಾಂಗ್ 3 ಪೆಗ್.
ಅನೇಕ ಕನ್ನಡ ಭಾಷಾ ಪ್ರೇಮಿಗಳ ಪ್ರಕಾರ ಇದು ಕನ್ನಡ ಭಾಷೆಯನ್ನು ಅವಮಾನಿಸಿದ ಹಾಡು. ಹಾಗೆಯೇ ಕನ್ನಡದ ನೆಲಮೂಲವನ್ನು ಬೇರೆ ಭಾಷೆಯ ಜೊತೆಗೆ ಮಿಶ್ರಣ ಮಾಡಿ ಅರ್ಥ, ಸ್ಪಷ್ಟತೆಗಳನ್ನು ಹಾಳುಗೆಡವಿ ಭಾಷೆಯನ್ನೇ ಅಪಭ್ರಂಶುಗೊಳಿಸಿತು ಎಂಬುದಾಗಿತ್ತು. ಅದು ಅವರವರ ಅಭಿವ್ಯಕ್ತಿಯಾದರೂ ಅವರು ಕನ್ನಡ ಭಾಷೆಯ ಮೇಲಿನ ಒಲವಿಗೆ, ಪ್ರೇಮಕ್ಕೆ ಕಟ್ಟು ಬಿದ್ದು ಆತನ ಪ್ರಯತ್ನವನ್ನು ಮೆಚ್ಚಿಯೂ ಸಹ ಆ ವಿಭಿನ್ನ ಪ್ರಕಾರವನ್ನು ಸ್ವಾಗತಿಸದೇ ಮಾತನಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?
ತಾನೇ ಬಯಸಿ ಹೋದ ಸೆರೆಮನೆಯಿಂದ ಕೆಲ ದಿನಗಳಲ್ಲಿಯೇ ಬಿಡುಗಡೆಯಾಗುವ ಚಂದನ್ ಶೆಟ್ಟಿಯ ಪ್ರಯತ್ನ, ಆಸ್ಥೆ, ತುಡಿತ, ಎಲ್ಲವೂ ಹೆಚ್ಚಾಗಿ ಆತನಿಂದ ಇನ್ನೂ ಅನೇಕ ಹಾಡುಗಳು, ಹೊಸ ಹೊಸ ಪ್ರಯೋಗಗಳನ್ನು ಮಾಡುವಂತಾಗಲಿ. ಇನ್ನು ಆತನ ಬಯಕೆಯಂತೆ ಆತನು ಜನರೇ ಧಾರಾಳವಾಗಿ ಕೊಡುವ ಬೇಲ್ ಪಾಲಾಗುವ ಬದಲು ಬಿಗ್‍ಬಾಸ್ ಕೊಡುವ ವಿಜಯದ ಮಾಲ್ ಪಾಲಾಗಲಿ ಎಂಬುದೇ ನಮ್ಮ ಆಶಯ.

Tags: , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.