MENU

‘ಸೂಫಿ’ ಚಿತ್ರದಲ್ಲಿ ಪುಟ್ಟಗೌರಿ

ನಾಚಿಕೆಯಿಲ್ಲದ ಬೆಂಗಳೂರು ವಿಶ್ವವಿದ್ಯಾಲಯ….

January 5, 2018 ಪ್ರಚಲಿತ, ಮನರಂಜನೆ, ಯುವಜನ, ಸಂಗೀತ, ಸಿನಿಮಾ, ಹವ್ಯಾಸ

ಸ್ವೀಟ್ ಸಿಂಗರ್ ವಸಿಷ್ಠ ಸಿಂಹ….

ಕಂಚಿನ ಕಂಠದ ಖಳನಟ ವಸಿಷ್ಠ ಸಿಂಹ ತಮ್ಮ ನಟನೆಯಿಂದ ಮಾತ್ರವಲ್ಲ, ತಮ್ಮ ಕಂಠದಿಂದಲೂ ಹೆಚ್ಚು ಮೋಡಿ ಮಾಡಿದ್ದಾರೆ. ವಸಿಷ್ಠ ಕನ್ನಡದ ಕೂಲ್ ವಿಲನ್ ಮಾತ್ರವಲ್ಲ, ಸ್ಟೀಟ್ ಸಿಂಗರ್ ಕೂಡ ಹೌದು. ಇತ್ತೀಚೆಗಷ್ಟೇ ವಸಿಷ್ಠ ಸಿಂಹ ‘ದಯವಿಟ್ಟು ಗಮನಿಸಿ’ ಚಿತ್ರದಲ್ಲಿ ಹಾಡಿದ ‘ಮರೆತೇ ಹೋದೇನು’ ಹಾಡಿನ ಹ್ಯಾಂಗೋವರ್ ನಿಂದ ಜನ ಇನ್ನೂ ಹೊರಬಂದಿಲ್ಲ. ಅಷ್ಟರಲ್ಲೇ ಹೊಸದೊಂದು ಪಾರ್ಟಿ ಸಾಂಗ್ ಹಾಡುವ ಮೂಲಕ ಸಂಗೀತ ಪ್ರಿಯರರಿಗೆ ಮತ್ತೆ ಕಿಕ್ ಕೊಟ್ಟಿದ್ದಾರೆ.

ಯೆಸ್! ವಸಿಷ್ಠ ಸಿಂಹ ಕನ್ನಡದ ನೂತನ ಚಿತ್ರವಾದ ‘ಒಂದು ಲವ್ ಎರಡು ಸ್ಟೋರಿ’ಯಲ್ಲಿ Rap ಸಾಂಗ್ ಹಾಡಿದ್ದು, ಆ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕನ್ನಡದ ಸಂಗೀತ ರಸಿಕರು ವಸಿಷ್ಠ ಹಾಡಿರುವ ‘ಹ್ಯಾಂಗೋವರ್’ ಹಾಡು ಕೇಳಿ ಫುಲ್ ಫಿದಾ ಆಗಿಬಿಟ್ಟಿದ್ದಾರೆ. ವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿರುವ ಈ ಹಾಡಿಗೆ ಮರುಳಾಗದವರೇ ಉಳಿದಿಲ್ಲ!

ಅಂದ್ಹಾಗೆ, ವಸಿಷ್ಠ ಸಿಂಹ ಹಾಡಿರುವ ಮೊದಲ Rap ಸಾಂಗ್ ಇದು. ಹಾಡಿನ ಯಶಸ್ಸಿನಿಂದ ಸ್ವತಃ ವಸಿಷ್ಠ ಕೂಡ ಖುಷಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಕನ್ನಡದಲ್ಲಿ Rap ಸಾಂಗ್ ಗಳ ಮೂಲಕ ಖ್ಯಾತಿ ಗಳಿಸಿಕೊಂಡಿರುವುದು ಚಂದನ್ ಶೆಟ್ಟಿ ಮಾತ್ರ. ಈಗವರಿಗೆ ಪ್ರತಿಸ್ಪರ್ಧಿಯಾಗಿ ಹುಟ್ಟಿಕೊಂಡಿರುವ ವಸಿಷ್ಠ ಸಿಂಹ Rap ಸಂಗೀತಪ್ರಿಯರಿಗೆ ಮತ್ತೊಂದಷ್ಟು ಕಾಲ ಡಬಲ್ ಕಿಕ್ ನೀಡುವುದು ನಿಶ್ಚಿತ.

ಚಿತ್ರವನ್ನು ಅವರದೇ ಹೆಸರನ್ನು ಹೊಂದಿರುವ ಯುವ ನಿರ್ದೇಶಕ ವಸಿಷ್ಠ ನಿರ್ದೇಶಿಸುತ್ತಿದ್ದು, ಸಂತೋಷ್, ಮಧು, ಪ್ರಕೃತಿ, ವಚನಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸದ್ಯ ಯಶಸ್ವಿಯಾಗಿರುವ ‘ಹ್ಯಾಂಗೋವರ್’ ಗೀತೆಯನ್ನು ಸ್ವತಃ ರಚಿಸಿ, ಸಂಗೀತ ಸಂಯೋಜಿಸಿರುವವರು ಮತ್ತೊಬ್ಬ ಯುವ ಸಂಗೀತ ನಿರ್ದೇಶಕ ಸಿದ್ಧಾರ್ಥ್.

‘ಹ್ಯಾಂಗೋವರ್’ ಚಿತ್ರಗೀತೆಯ ಯಶಸ್ಸು ‘ಒಂದು ಲವ್ ಎರಡು ಸ್ಟೋರಿ’ ಚಿತ್ರತಂಡಕ್ಕೆ ಹೊಸದೊಂದು ಹ್ಯಾಂಗೋವರ್ ಸೃಷ್ಟಿಸುತ್ತದಾ ಕಾದು ನೋಡಬೇಕಿದೆ.

Tags: , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.