MENU

ದಾದಾಗಿರಿಯ ದಿನಗಳು

ಕೃಷ್ಣ ಜನ್ಮಸ್ಥಾನಕ್ಕೆ ಅಶೋಕ್?!

January 9, 2018 ಅಂತಾರಾಷ್ಟ್ರೀಯ, ಪ್ರಚಲಿತ, ಮನರಂಜನೆ, ಯುವಜನ, ರಾಷ್ಟ್ರೀಯ, ಸಂಗೀತ, ಸಿನಿಮಾ

ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2018 ಡಿಸ್ ಕ್ಲೋಸ್ಡ್!

ವರ್ಷದ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ವಿಜೇತರ ಪಟ್ಟಿ ಈಗಷ್ಟೇ ಪ್ರಕಟವಾಗಿದೆ. ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ಆಯೋಜನೆ ಮಾಡುವ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮೆರಿಕಾದ ಸಿನಿಮಾ ಹಾಗೂ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.

ಪ್ರಶಸ್ತಿ ಸಮಾರಂಭದಲ್ಲಿ ಮಾರ್ಟಿನ್ ಮೆಕ್ಡೊನಾಗ್ ನಿರ್ದೇಶನ ಮಾಡಿದ ‘ಥ್ರೀ ಬಿಲ್‌ಬೋರ್ಡ್ಸ್ ಔಟ್ ಸೈಡ್ ಎಂಬಿಂಗ್ನ್ ಮಿಸ್ಸೌರಿ’ ಚಿತ್ರಕ್ಕೆ ನಾಲ್ಕು ಕೆಟಗರಿಯಲ್ಲಿ ಪ್ರಶಸ್ತಿ ಸಿಕ್ಕಿದೆ. ರೇಟಾ ಗೆರ್ವಿಗ್ ನಿರ್ದೇಶನದ ‘ಲೇಡಿ ಬರ್ಡ್’ ಸಿನಿಮಾ ಸ್ಯಾಮ್ ರಾಕ್ ವೆಲ್ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಹಾಸ್ಯದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಕೂಡ ‘ಲೇಡಿ ಬರ್ಡ್’ ಚಿತ್ರತಂಡಕ್ಕೆ ಸಿಕ್ಕಿದೆ.
ಟೆಲಿವಿಷನ್ ಸೀರೀಸ್ ಕಾಮಿಡಿಯಲ್ಲಿ ಅತ್ಯುತ್ತಮ ನಟಿ ರಾಚೆಲ್ ಬ್ರಾನ್ಸಾನನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಟೆಲಿವಿಷನ್ ಸೀರಿಸ್ ಡ್ರಾಮಾ ಕೆಟಗರಿಯಲ್ಲಿ ನಟಿ ಎಲಿಜಬೆತ್ ಮಾಸ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನು ಚಲನಚಿತ್ರ ವಿಭಾಗದಲ್ಲಿ ‘ಥ್ರೀ ಬಿಲ್‌ ಬೋರ್ಡ್ಸ್ ಔಟ್ ಸೈಡ್ ಎಂಬಿಂಗ್ನ್ ಮಿಸ್ಸೌರಿ’ ಚಿತ್ರ ಬೆಸ್ಟ್ ಸ್ಕ್ರೀನ್ ಪ್ಲೇ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ‘ವಿನ್ನರ್ ಇನ್ ದಿ ಫೇಡ್’ ಚಿತ್ರಕ್ಕೆ ಸಿಕ್ಕಿದೆ.
ಗೆಲ್ಲೆರ್ಮೊ ಡೆಲ್ ಟೊರೊ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಗ್ಯಾರಿ ಓಲ್ಡ್ಮನ್ ‘ದಿ ಡಾರ್ಕೆಸ್ಟ್ ಅವರ್’ ಚಿತ್ರದ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ಪಡೆದಿದ್ದಾರೆ.

Tags: , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.