MENU

ದಾದಾಗಿರಿಯ ದಿನಗಳು

ನಿದ್ದೆಗೆಟ್ಟ ‘ಮಿಸ್ ಮಲ್ಲಿಗೆ.’..!

February 15, 2018 ಪ್ರಚಲಿತ, ಬೆಂಗಳೂರು, ಯುವಜನ, ರಾಜಕೀಯ, ರಾಜ್ಯ, ರಾಷ್ಟ್ರೀಯ, ಸಂಗೀತ, ಸಿನಿಮಾ

ಕಾಪಿರೈಟ್ ಪೀಕಲಾಟ…!

ಚುನಾವಣೆ ಬಂತೆಂದರೆ ಯಾವುದೋ ಹಾಡಿಗೆ ಮತ್ತಾವುದೋ ಲಿರಿಕ್ಸ್ ಬರೆದು ಊರ ತುಂಬಾ ಪ್ರಚಾರದ ಘಮಲನ್ನು ಹೆಚ್ಚಿಸುತ್ತಿದ್ದ ಆಯಾ ಪಕ್ಷದ ಅಭ್ಯರ್ಥಿಗಳಿಗೊಂದು ಶಾಕಿಂಗ್ ನ್ಯೂಸ್. ಇನ್ನು ಮುಂದೆ ಚುನಾವಣಾ ಪ್ರಚಾರಕ್ಕಾಗಿ ರಾಜಕೀಯ ಪಕ್ಷಗಳು ಜನಪ್ರಿಯ ಕನ್ನಡ ಚಿತ್ರಗೀತೆಗಳ ಟ್ಯೂನ್ ಬೇಕಾಬಿಟ್ಟಿ ಬಳಸಿಕೊಳ್ಳುವಂತಿಲ್ಲ. ಸಾಹಿತ್ಯ ಬದಲಾಯಿಸಿ, ಟ್ಯೂನ್ ಬಳಸಿಕೊಳ್ಳಬೇಕಾದರೆ ಒಂದಕ್ಕೆ ಎರಡು ಸಲ ಯೋಚಿಸಿ ಮುಂದಡಿ ಇಡಬೇಕಾಗುತ್ತದೆ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ರಾಜಕೀಯ ಮುಖಂಡರಿಗೆ ತೊಂದರೆ ತಪ್ಪಿದ್ದಲ್ಲ.

ರಾಜಕೀಯ ಪಕ್ಷಗಳು ಜನಪ್ರಿಯ ಚಿತ್ರಗೀತೆಗಳ ಸಾಹಿತ್ಯವನ್ನು ಬದಲಾಯಿಸಿಕೊಂಡು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿವೆ. ಆದರೆ ಆಡಿಯೋ ಕಂಪೆನಿಗಳು ಮತ್ತು ಕಾಪಿ ರೈಟ್ ಮಾಲೀಕರಿಗೆ ಅದರಿಂದ ಯಾವುದೇ ರಾಯಧನ ಸಿಗುತ್ತಿಲ್ಲ. ಹಾಗಾಗಿ ಆ ಕಂಪೆನಿಗಳು ಈಗ ರಾಜಕೀಯ ಪಕ್ಷಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿವೆ.

ಈಗಾಗಲೆ ಹಲವಾರು ಸಹ ನಿರ್ದೇಶಕರು ಜನಪ್ರಿಯ ಚಿತ್ರಗೀತೆಗಳ ಸಾಹಿತ್ಯವನ್ನು ಆಯಾ ರಾಜಕೀಯ ಪಕ್ಷಗಳ ಪ್ರಣಾಳಿಕೆಗೆ ತಕ್ಕಂತೆ ಬದಲಾಯಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಆಡಿಯೋ ಕಂಪೆನಿಗಳು ಮಾತ್ರ ಪಕ್ಷಗಳ ಮೇಲೆ ಒಂದು ಕಣ್ಣಿಟ್ಟಿವೆ. ರಾಯಧನ ಕೊಡದಿದ್ದರೆ ಜನಪ್ರಿಯ ಗೀತೆಗಳ ಟ್ಯೂನ್‌ ಬಳಸಿಕೊಳ್ಳುವಂತಿಲ್ಲ ಎನ್ನುತ್ತಿವೆ. ಈ ವಿಚಾರವಾಗಿ ಚುನಾವಣಾ ಆಯೋಗ ನೇರವಾಗಿ ಮೂಗು ತೂರಿಸದಿದ್ದರೂ, ಜನಸಾಮಾನ್ಯರು ದೂರು ನೀಡಿದರೆ ರಾಜಕಾರಣಿಗಳಿಗೆ, ಪಕ್ಷಗಳು ಬೆಲೆ ತೆರಬೇಕಾಗುತ್ತವೆ.


ಒಂದು ವೇಳೆ ಸಿನಿಮಾ ಟ್ಯೂನ್‌ಗಳನ್ನು ಬಳಸಿಕೊಂಡು ಯಾರೂ ಕಾಪಿರೈಟ್‌, ರಾಯಲ್ಟಿಗೆ ಬೇಡಿಕೆ ಸಲ್ಲಿಸದಿದ್ದರೂ ರಾಜಕೀಯ ಪಕ್ಷಗಳು ನಿರಾಳವಾಗಿ ಕೂರುವಂತಿಲ್ಲ. ಜನಸಾಮಾನ್ಯರು ಈ ಬಗ್ಗೆ ಚುನಾವಣಾ ಆಯೋಗಕ್ಕೆ ತಕರಾರು ಸಲ್ಲಿಸಿಬಹುದು. ಆಗ ರಾಜಕೀಯ ಪಕ್ಷಗಳು ಭಾರಿ ಬೆಲೆ ತೆರೆಬೇಕಾಗುತ್ತದೆಯಂತೆ.
‘ಕಾಪಿರೈಟ್ ತಿದ್ದುಪಡಿ ಕಾಯಿದೆ ಪ್ರಕಾರ, ಹಾಡೊಂದಕ್ಕೆ ಆಡಿಯೋ ಕಂಪೆನಿ, ಸಂಗೀತ ಸಂಯೋಜಕ ಹಾಗೂ ಸಾಹಿತ್ಯ ರಚಿಸಿದವರು ಮಾಲೀಕರಾಗಿರುತ್ತಾರೆ. ಆ ಹಾಡನ್ನು ಬಳಸಿಕೊಳ್ಳಬೇಕಾದರೆ ಈ ಮೂವರ ಅನುಮತಿ ಪಡೆಯಬೇಕು. ಒಂದು ವೇಳೆ ಸಾಹಿತ್ಯ ಬದಲಾಯಿಸಿದರೂ ಆಡಿಯೋ ಕಂಪೆನಿ ಮತ್ತು ಸಂಗೀತ ಸಂಯೋಜಕರ ಅನುಮತಿ ಪಡೆಯಬೇಕಂತೆ.
ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಟ್ಯೂನ್‌ಗಳಿಗೆ ಇಂತಿಷ್ಟೇ ಹಣ ಅಂತಿಲ್ಲ. ಕಂಪೆನಿಯಿಂದ ಕಂಪೆನಿಗೆ ರಾಯಲ್ಟಿ ಬದಲಾಗುತ್ತದೆ. ಆಡಿಯೋ ಕಂಪೆನಿ ಮತ್ತು ಸಂಗೀತ ಸಂಯೋಜಕರ ಬೇಡಿಕೆ ಮೇರೆಗೆ ನ್ಯಾಯೋಚಿತ ಬೆಲೆ ನಿರ್ಧಾರವಾಗುತ್ತದೆ. ಪ್ರತಿ ಹಾಡಿಗೆ ಆಡಿಯೋ ಕಂಪೆನಿಗಳು 1 ರಿಂದ 10 ಲಕ್ಷ ರೂ.ಗಳ ತನಕ ಬೇಡಿಕೆ ಇಡುತ್ತವೆ. ಚುನಾವಣೆಗಳಿಗೆ ಬಳಸಬೇಕಾದ ಹಾಡುಗಳಿಗೆ ನ್ಯಾಯೋಚಿತ ಮೌಲ್ಯ ಈ ಚುನಾವಣಾ ಸೀಸನ್‌ನಲ್ಲಿ ನಿರ್ಧರಿಸಬಹುದು.

Tags: , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.