MENU

ರೆಟ್ರೋ ಅವತಾರದಲ್ಲಿ ಹರಿಪ್ರಿಯಾ….

ಮನೆ ಮಾರು…! ಊರು ಸುತ್ತು…..!

February 23, 2018 ಅಂತಾರಾಷ್ಟ್ರೀಯ, ಪುಟ್ಬಾಲ್, ಪ್ರಚಲಿತ, ಬೆಂಗಳೂರು, ಯುವಜನ, ರಾಜ್ಯ, ರಾಷ್ಟ್ರೀಯ, ವೃತ್ತಿಪರತೆ, ಶಿಕ್ಷಣ, ಸ್ತ್ರೀ, ಸ್ತ್ರೀ ಸಂವೇದನೆ, ಹವ್ಯಾಸ

ಸ್ಟಾರ್ ಪತ್ನಿಗೆ ಒಲಿದ ಟೀಚರ್ ಪಟ್ಟ….!

ಇಂಡಿಯನ್ ಸೂಪರ್ ಲೀಗ್ ಫುಟ್​ಬಾಲ್​ನೊಂದಿಗೆ ಎಎಫ್​ಸಿ ಕಪ್ ಫುಟ್​ಬಾಲ್ ಟೂರ್ನಿಯಲ್ಲೂ ಬೆಂಗಳೂರು ಫುಟ್​ಬಾಲ್ ಕ್ಲಬ್ ಪಾರಮ್ಯ ಮೆರೆಯುತ್ತಿದೆ. ದೇಶೀಯ ಆಟಗಾರರರೊಂದಿಗೆ ವಿದೇಶಿ ಆಟಗಾರರ ಶಕ್ತಿಯೊಂದಿಗೆ ಬಿಎಫ್​ಸಿ ಮಿಂಚುತ್ತಿದೆ. ಸಾಮಾನ್ಯವಾಗಿ ವಿದೇಶದ ಆಟಗಾರ ತವರಿನಿಂದ ಹೊರಗಿನ ಕ್ಲಬ್ ಪರ ಆಡುವಾಗ ಕುಂಟುಂಬವನ್ನು ಬಿಟ್ಟು ಹೊರಗುಳಿಯುವುದು ಸಾಮಾನ್ಯ. ಆದರೆ, ಬಿಎಫ್​ಸಿ ಕ್ಲಬ್​ನ ಮಿಡ್​ಫೀಲ್ಡರ್ ಎಡು ಗಾರ್ಸಿಯಾ ಪತ್ನಿ ಮಾತ್ರ ಭಿನ್ನ. ಪತಿ ಅಭ್ಯಾಸಕ್ಕಾಗಿ ಕಂಠೀರವ ಸ್ಟೇಡಿಯಂ ಕಡೆಗೆ ತೆರಳಿದರೆ, ಅವರ ಪತ್ನಿ ಎಡ್ರಿಯಾನಾ ಹೆಗಲಿಗೆ ಒಂದು ಬ್ಯಾಗ್ ಏರಿಸಿಕೊಂಡು ಬೆಂಗಳೂರಿನಿಂದ ಒಂದು ಗಂಟೆ ಪ್ರಯಾಣ ದೂರದಲ್ಲಿರುವ ಕಂಗಾನಹಳ್ಳಿಗೆ ತೆರಳಿ ಬಿಡುತ್ತಾರೆ. ಚಿಕ್ಕಬಳ್ಳಾಪುರದ ಕಂಗಾನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಡ್ರಿಯಾನಾ ಸ್ವಯಂಸೇವಕಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಮಕ್ಕಳಿಗೆ ಪಾಠ, ನೃತ್ಯ, ಧ್ಯಾನವನ್ನು ಹೇಳಿಕೊಡುತ್ತಿದ್ದಾರೆ.

ಸ್ಪೇನ್​ನ ಆದಾಯರಹಿತ ಎನ್​ಜಿಒನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು  ಮಕ್ಕಳಿಗೆ ಶಿಕ್ಷಣ, ಬಟ್ಟೆ ಸೇರಿದಂತೆ ಶಾಲೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಇರಬೇಕು ಎನ್ನುವ ಕುರಿತು ಎನ್ ಜಿಓ ಮುಖೇನ ಕೆಲಸ ಮಾಡುತ್ತಿದ್ದಾರೆ. ಎಡ್ರಿಯಾನಾ ಬೆಂಗಳೂರಿಗೆ ಹೋಗುವ ಪ್ಲಾನ್ ತಿಳಿಸುತ್ತಿದ್ದಂತೆ ಎನ್ ಜಿ ಓ ಈ ಜವಾಬ್ದಾರಿಯನ್ನು ಈಕೆಯ ಹೆಗಲಿಗೇರಿಸಿದೆ. ಅದಕ್ಕಾಗಿ ಈಕೆ ಹಾಗೂ ಗೆಳತಿ ನೋಮಾ ಟೀಚರ್ ಆಗಿ ಕೆಲ ಮಾಡುತ್ತಿದ್ದಾರಂತೆ. ಈ ಮೂಲಕ ಇಂಗ್ಲೀಷ್ ಸೇರಿದಂತೆ ಇತರ ಭಾಷೆಗಳ ಕುರಿತಾಗಿ ಜ್ಞಾನ ಮೂಡಿಸುವ ಹೊಣೆ ಹೊತ್ತಿದ್ದಾರೆ. ಮೊದಲಿನಿಂದಲೂ ಇಂಥದ್ದೊಂದು ಕೆಲಸದ ಭಾಗವಾಗಿರಬೇಕು ಎನ್ನುವುದು ಎಡ್ರಿಯಾನಾ ಳ  ಆಸೆಯಾಗಿತ್ತಂತೆ.  ಈಗ ಅದು ಸಾಧ್ಯವಾಗುತ್ತಿರುವುದಕ್ಕೆ ಬಹಳ ಖುಷಿಯಾಗಿದ್ದಾರಂತೆ. ಮಕ್ಕಳಿಗೆ ಇವರು ಕಲಿಸುವುದಕ್ಕಿಂತ ಇಲ್ಲಿನ ವಾತಾವರಣ ಮತ್ತು ಮಕ್ಕಳೇ ಇವರಿಗೆ ತುಂಬಾ ಕಲಿಸುತ್ತಿದ್ದಾರೆ ಎನ್ನುವುದು ಎಡ್ರಿಯಾನಾಳ ಅಭಿಪ್ರಾಯ.

Tags: , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.