MENU

ಪುಟ್ಟರಾಜು Lover of ಶಶಿಕಲಾ…!

ಸಿದ್ದು ವಿದಾಯದ ಭಾಷಣ…!

February 24, 2018 ಕ್ರೈಂ, ಪ್ರಚಲಿತ, ಬೆಂಗಳೂರು, ಮನರಂಜನೆ, ರಾಷ್ಟ್ರೀಯ, ಸಂಗೀತ

ಕಿಸ್ ಮಾಡಿದ್ದಕ್ಕೆ ಕೇಸ್…!

ಪ್ರಾಪ್ತ ಬಾಲಕಿಗೆ ಅನುಚಿತವಾಗಿ ಕಿಸ್ ಮಾಡಿದ ಆರೋಪದ ಮೇಲೆ ಬಾಲಿವುಡ್ ಗಾಯಕ ಅಂಗರಗ್ ಪಪೊನ್ ಮಹಂತಾ ಅವರ ವಿರುದ್ಧ ಪೋಸ್ಕೋ ಕಾಯ್ಡೆ ಅಡಿ ದೂರು ದಾಖಲಿಸಲಾಗಿದೆ.

ಹಿಂದಿ ಗಾಯನ ರಿಯಾಲಿಟಿ ಶೋ ಕಾರ್ಯಕ್ರಮದ ಚಿತ್ರೀಕರಣದ ವೇಳೆ ಸ್ಪರ್ಧಿಗಳಲ್ಲಿ ಒಬ್ಬಳಾಗಿದ್ದ ಬಾಲಕಿಗೆ ಪಾಪೊನ್ ಕಿಸ್ ಮಾಡಿದ್ದು, ಈ ಸಂಬಂಧ ಗಾಯಕನ ವಿರುದ್ಧ ದೂರು ದಾಖಲಿಸಲಾಗಿದೆ.

ಈ ಸಂಬಂಧ ಸುಪ್ರೀಂ ಕೋರ್ಟ್ ವಕೀಲ ರುನಾ ಭಯುನ್ ಅವರು ಅಸ್ಸಾಂ ಮೂಲದ ಗಾಯಕನ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.

ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳ ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಈ ಕುರಿತು ಆಯೋಗಕ್ಕೆ ದೂರು ಸಲ್ಲಿಸಲಾಗಿದೆಯಂತೆ. ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯಲ್ಲಿರುವುದಾಗಿ  ಭುಯುನ್ ತಿಳಿಸಿದ್ದಾರೆ.

ಗಾಯನ ರಿಯಾಲಿಟಿ ಶೋನಲ್ಲಿ ಹೋಳಿ ಹಬ್ಬ ಆಚರಿಸಿದ ಪಪೊನ್, ಸ್ಪರ್ಧಿಗಳ ಜತೆ ಫೋಟೋ ತೆಗೆಸಿಕೊಂಡ ಮೇಲೆ ಬಾಲಕಿಯ ಮುಖಕ್ಕೆ  ಬಣ್ಣವನ್ನು ಬಳಿದು, ಆಕೆಯ ತುಟಿಗೆ ಮುತ್ತಿಡುತ್ತಾರೆ. ಮೇಲ್ನೋಟಕ್ಕೆ ಇದು ಉದ್ದೇಶಪೂರ್ವಕವಾಗಿ ಮಾಡಿದಂತೆ ತೋರುವುದಿಲ್ಲವಾದರೂ, ಅಪ್ರಾಪ್ತರಿಗೆ ಈ ರೀತಿ ಮುತ್ತಿಡುವುದು ಸರಿಯಲ್ಲ ಎನ್ನಲಾಗುತ್ತಿದೆ.

Tags: , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.