MENU

ದಾದಾಗಿರಿಯ ದಿನಗಳು

“ಮುಧೋಳ್” ಹಿಂದೆ ಮೋದಿ..!

May 7, 2018 ಪ್ರಚಲಿತ, ಬೆಂಗಳೂರು, ಮನರಂಜನೆ, ಯುವಜನ, ರಾಜ್ಯ, ಸಂಗೀತ, ಸಿನಿಮಾ, ಹವ್ಯಾಸ

ಎಚ್ಚೆಸ್ವಿ ಹೊಸ ಇನ್ನಿಂಗ್ಸ್…..

ನಿರ್ದೇಶಕರಾಗಿದ್ದವರು, ಸಾಹಿತಿಗಳಾಗಿದ್ದವರು ಸಿನಿಮಾ ರಂಗ ಪ್ರವೇಶಿಸುವುದು ಈಗೀಗ ಕಾಮನ್ ಆಗಿಬಿಟ್ಟಿದೆ. ಆ ಕ್ಯಾಟಗೆರಿಗೆ ಹೊಸ ಸೇರ್ಪಡೆ ಎಚ್. ಎಸ್. ವೆಂಕಟೇಶ್ ಮೂರ್ತಿ. ತಮ್ಮ ವಿಶೇಷ ಗೀತೆಗಳ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿದ್ದ ವೆಂಕಟೇಶ್ ಮೂರ್ತಿಯವರೀಗ ಹೊಸ ಸಿನಿಮಾವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

‘ಎಲ್ಲುಂಟು ಒಲವಿರದ ಜಾಗ..’ ಎಂದು ಬರೆದ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಇತ್ತೀಚಿಗಷ್ಟೆ ತಮ್ಮ ನಿರ್ದೇಶನದ  ಮೊದಲ ಸಿನಿಮಾವೊಂದನ್ನು ಶುರು ಮಾಡಿದ್ದರು. ‘ಹಸಿರು ರಿಬ್ಬನ್’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಎಚ್ಚೆಸ್ವಿ ಆ ಸಿನಿಮಾದ ಬಿಡುಗಡೆಗೆ ಮೊದಲೇ ಮತ್ತೊಂದು ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರಂತೆ. ‘ಅಮೃತ ವಾಹಿನಿ’ ಎಂಬ ಹೊಸ ಚಿತ್ರದಲ್ಲಿ ಈಗ ಎಚ್.ಎಸ್.ವೆಂಕಟೇಶ್ ಮೂರ್ತಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ನಿನ್ನೆ (ಮೇ 6) ರಂದು ನೆರವೇರಿದೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಎಚ್ಚೆಸ್ವಿ ಕಾಣಿಸಿಕೊಳ್ಳುತ್ತಿದ್ದು, ನರೇಂದ್ರ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಅವರು ‘ಪಲ್ಲಕ್ಕಿ’, ‘ಓ ಗುಲಾಬಿಯೇ’ ಹಾಗೂ ‘ಯುವ’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಎಚ್ಚೆಸ್ವಿ ಅವರೊಂದಿಗೆ ವೈದ್ಯ ಶಿವಮೊಗ್ಗ, ಸ್ವಸ್ತಿಕ್ ಶಂಕರ್, ಜಯಪ್ರಕಾಶ್, ವತ್ಸಲಾ ಮೋಹನ್ ನಟಿಸಿದ್ದಾರೆ. ಸಂಪತ್ ಕುಮಾರ್ ಎಂಬುವವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣ ಹಾಗೂ ಮೋಹನ್ ಸಂಗೀತ ಚಿತ್ರದಲ್ಲಿದೆ. ರಾಘವೇಂದ್ರ ಪಾಟೀಲ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಪ್ರಸ್ತುತ ಜೀವನ ಶೈಲಿಗೆ ಹತ್ತಿರವಾದ ಕತೆ ಈ ಚಿತ್ರದಲ್ಲಿ ಇದೆಯಂತೆ.

Tags: , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.