MENU

ಬೆಂಗಳೂರಿಗರಿಗೆ ಏನಾಯ್ತು…!

ಅಳಿ(ಳ)ಲು…

May 14, 2018 ಪ್ರಚಲಿತ, ಬೆಂಗಳೂರು, ಮನರಂಜನೆ, ಯುವಜನ, ರಾಜ್ಯ, ಸಂಗೀತ, ಸಿನಿಮಾ, ಹವ್ಯಾಸ

Rambo 2

ಗವಾಯಿ ಗರಡಿಯ ಹುಡುಗ ಮೆಹಬೂಬ್‌ ಸಾಬ್‌…

ರಡು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಣ್ತೊತ್ತಿದ್ದರೂ ಒಂದು ಬೇಸ್ ಸಿಗದೇ ಹೆಣಗಾಡಿದ ನಟರಲ್ಲಿ ಶರಣ್ ಕೂಡಾ ಒಬ್ಬರು. ಅವರು ಸುಮಾರು 99 ಚಿತ್ರಗಳಲ್ಲಿ ಅಭಿನಯಿಸಿದ್ದರೂ ಜನ ಶರಣ್ ಅನ್ನು ಗುರುತಿಸಿದ್ದು 100 ನೇ Rambo ನಲ್ಲಿಯೇ. ಹೀಗೆ ತನ್ನ 100 ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟನಾಗಿದ್ದವನೂ ನಾಯಕನಾಗಿ ಗೆಲ್ಲಬಲ್ಲ ಎಂದು ತೋರಿಸಿಕೊಟ್ಟ ಕೀರ್ತಿ ಶರಣ್ ರವರದ್ದು.

ಆ ಚಿತ್ರದ ನಂತರ ಅನೇಕ ಚಿತ್ರಗಳು ಹಿಟ್ ಫ್ಲಾಫ್ ಪಟ್ಟಿಗೆ ಸೇರಿದ್ದು ಬೇರೆ ವಿಷಯ. ಈ ವಿಷ್ಯ ಈಗ್ಯಾಕಪ್ಪ ಅಂದ್ರೆ… ಅದೇ Rambo ಹೆಸರಿನಲ್ಲಿ ಶರಣ್ ತಮ್ಮ ಮುಂದಿನ ಚಿತ್ರವನ್ನು ಘೋಷಿಸಿಕೊಂಡಿದ್ದಾರೆ. ಅದು Rambo 2 ಆಗಿ….ಅನಿಲ್‌ ಕುಮಾರ್‌ ಎಂಬುವವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಅಂದ ಗಾಯಕ ಮೆಹಬೂಬ್‌ ಸಾಬ್‌

‘Rambo 2’ ರಾರ‍ಯಂಬೋ ನಂತೆಯೇ ಈ ಚಿತ್ರವೂ ಹಾಡುಗಳಿಂದಲೇ ಮೋಡಿ ಮಾಡುತ್ತಿವೆ. ಈಗಾಗಲೇ ಆನ್ ಲೈನ್ ನಲ್ಲಿ Rambo 2 ಹಾಡುಗಳು ಹಿಟ್ ಆಗಿವೆ. ಚುಟು ಚುಟು ಹಾಡು 55 ಲಕ್ಷಕ್ಕೂ ಹೆಚ್ಚು ಹಿಟ್‌ ಸಂಪಾದಿಸಿದೆ. ಶಾಕಿಂಗ್ ನ್ಯೂಸ್ ಏನಪ್ಪ ಅಂದ್ರೆ ಈಗಾಗಲೇ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಇರುವ ಹಾಡುಗಳಲ್ಲಿ ‘ಬಿಟ್ಟೋಗ್ಬೇಡ..’ ಹಾಡನ್ನು ರಿಯಾಲಿಟಿ ಶೋನಲ್ಲಿ ಅಪಾರ ಮೆಚ್ಚುಗೆ ಗಳಿಸಿದ್ದ ಮೆಹಬೂಬ್‌ ಸಾಬ್‌ ಹಾಡೋ ಮೂಲಕ ಚಲನಚಿತ್ರ ಗಾಯಕರಾಗಿ ಹೊರಹೊಮ್ಮಿದ್ದಾರಂತೆ. ಶರಣ್‌ ನಟನೆಯ ಎಲ್ಲಾ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಅರ್ಜುನ್‌ ಜನ್ಯ ಸಂಗೀತ ಹೊಸ ರೀತಿಯಲ್ಲಿಯೇ ಮೋಡಿ ಮಾಡಿವೆ.

ಶರಣ್ ಮತ್ತು ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ನ ಸಾಕಷ್ಟು ಹಾಡುಗಳು ಇಲ್ಲಿಯವರೆವಿಗೂ ಜನಪ್ರಿಯತೆ ಗಳಿಸುತ್ತಲೇ ಬಂದಿದ್ದು, ಇದು ಪ್ರತಿ ಚಿತ್ರಗಳಲ್ಲಿಯೂ ದುಪ್ಪಟ್ಟಾಗುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಈ ಬಾರಿಯೂ ಚಿತ್ರತಂಡ ಇದೇ ಹೈಪ್ ನಲ್ಲಿದೆ. ಮೆಹಬೂಬ್ ಹಾಡಿರುವ ಹಾಡು ಎಮೋಶನಲ್ ಆಗಿದ್ದು, ಅದಕ್ಕೆ ನಿರೀಕ್ಷಿಸಿದ್ದಕ್ಕಿಂತ ಮೆಹಬೂಬ್ ಇನ್ನಷ್ಟು ಭಾವುಕತೆ ತುಂಬಿದ್ದಾರೆ ಎನ್ನುವುದು ನಿರ್ದೇಶಕ ಅನಿಲ್ ಅಭಿಪ್ರಾಯ. ಸಂತೋಷ್‌ ನಾಯಕ್‌ ಮತ್ತು ಗೌಸ್‌ ಪೀರ್‌ ಈ ಹಾಡನ್ನು ಬರೆದಿದ್ದು, 19ಲಕ್ಷಕ್ಕೂ ಹೆಚ್ಚು ಜನ ಕೇಳಿದ್ದಾರೆ.

ಈಗಾಗಲೇ ಅಂದರಾಗಿದ್ದುಕೊಂಡೆ ಮೆಹಬೂಬ್‌ ಸಾಬ್‌ ಟಿವಿ ರಿಯಾಲಿಟಿ ಶೋನಲ್ಲಿ ಈಗಾಗಲೇ ಮನೆಮಾತಾಗಿದ್ದಾರೆ. ಅವರ ಕಂಠಕ್ಕೆ, ಮಾಧುರ್ಯಕ್ಕೆ ಜನ ಮನಸೋತಿದ್ದಾರೆ. ರಾರ‍ಯಂಬೋ ಹಾಡು ಕೂಡಾ ಅಷ್ಟೇ ಜನಪ್ರಿಯತೆ ಗಳಿಸಿದೆ. ಕುಂದಗೋಳ ತಾಲ್ಲೂಕಿನ ಮೆಹಬೂಬ್‌ ದಾವಣಗೆರೆಯಲ್ಲಿ ಪುಟ್ಟರಾಜ ಗವಾಯಿಗಳ ಶಾಖಾ ಮಠದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದವರು. ಚಿತ್ರದಲ್ಲಿ ಧಮ್‌ ಮಾರೋ ಧಮ್‌ ಲಿರಿಕಲ್‌ ವಿಡೀಯೋ 22 ಲಕ್ಷ ಹಿಟ್‌, ಯವ್ವಾ ಯವ್ವಾ ಹಾಡು 10 ಲಕ್ಷ ಹಿಟ್‌ ಗಳಿಸಿದೆ. ಚಿತ್ರ ಈ ವಾರ ರಿಲೀಸ್‌ ಆಗುತ್ತಿದೆ.

 

Tags: , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.