MENU

ಅವನೇ ಶ್ರೀಮನ್ನಾರಾಯಣ ಹವಾ ಶುರು…

ಒಳಗೂ ಬಯಲು ಹೊರಗೂ ಬಯಲು

June 8, 2018 ಪ್ರಚಲಿತ, ಬೆಂಗಳೂರು, ರಾಜಕೀಯ, ರಾಜ್ಯ, ರಾಷ್ಟ್ರೀಯ, ವೃತ್ತಿಪರತೆ

ಚಾನೆಲ್ ಗಳ ಸ್ಕೆಚ್ ಗೆ ಸರ್ಕಾರ ಉರುಳುತ್ತಾ…?

ಯಾರಿಗೆ ಸಚಿವ ಸ್ಥಾನ ಬೇಕೋ ಬೇಡವೋ ಗೊತ್ತಿಲ್ಲಾ… ಆದರೆ ಈ ಟಿವಿ ಚಾನೆಲ್ ಗಳಿಗಂತೂ ಸಚಿವ ಸ್ಥಾನ ಬೇಕೇ ಬೇಕು ಅನಿಸುತ್ತಿದೆ…! ಆ ಮಟ್ಟಿಗೆ ಪಕ್ಷದ ಶಾಸಕರಿಗಿಂತಲೂ ಎಗರಿ ಎಗರಿ ಬೀಳುತ್ತಿವೆ ಈ ಚಾನೆಲ್ ಗಳು. ಇದಕ್ಕೆ ಹಲವು ಕಾರಣಗಳ ಜೊತೆಗೆ ಮುಖ್ಯ ಕಾರಣ “ವೈದಿಕ್ ವೈರಸ್”ಗಳು. ಹಲವು ದಿನಪತ್ರಿಕೆಗಳು, ಚಾನೆಲ್ ಗಳಲ್ಲಿ ಸ್ಥಾಪಿತ ವೈದಿಕರಿದ್ದು, ಅವರ ಆಸೆ-ಗುರಿ ಎಲ್ಲವೂ ಬಿಜೆಪಿ-ಆರ್ ಎಸ್ ಎಸ್ ಎಂಬುದು ಗುಟ್ಟಾಗಿಲ್ಲ. ಹಾಗಾಗಿ ಈಗಿರುವ ಸರ್ಕಾರವನ್ನು ಉರುಳಿಸಿ, ಬಿಜೆಪಿಯನ್ನು ತಂದುಬಿಡುವ ಮನಸ್ಸು ಅವರುಗಳದ್ದು. ಬರೀ ಜಾತಿ ಕಾರಣವಷ್ಟೇ ಅಲ್ಲದೆ, ಇದರೊಡನೆ ಕಾಂಚಾಣದ ಕಾರಣವೂ ಇರುವುದೂ ಈಗ ಬಹಿರಂಗೊಂಡಿದೆ.

ಇರಬಹುದು… ಸಚಿವ ಸ್ಥಾನಕ್ಕಾಗಿ ರಾಜಕೀಯ ಪಕ್ಷಗಳಲ್ಲಿ ಕಲಹ, ಕಿತ್ತಾಟ ಇದ್ದೇ ಇರುತ್ತದೆ. ಇದು ಪ್ರತೀ ಬಾರಿಯೂ ನಡೆಯುತ್ತಿರುತ್ತದೆ. ಈ ಬಾರಿ ಕೊಂಚ ಭಿನ್ನ, ಅಥವಾ ಸ್ವಲ್ಪ ಹೆಚ್ಚಾಗಿದೆಯಷ್ಟೆ. ಹಾಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳು ಪರಸ್ಪರ ಭೇಟಿಯಾಗುವುದು, ಚರ್ಚಿಸುವುದು ಸಹಜ. ಹಾಗಂತ ಪಕ್ಷ ಬಿಟ್ಟೇಬಿಡುತ್ತಾರೆ, ಜಂಪ್ ಮಾಡುತ್ತಾರೆ ಎಂದೆಲ್ಲಾ ಖಚಿತವಾಗಿ ಹೇಳಿಬಿಡುವುದು ಸಮಂಜಸವೇ…?

ಅವರಿವರು ರಾಜಕಾರಣಿಗಳನ್ನು, ಕೆಲ ಪತ್ರಕರ್ತರನ್ನು ಕರೆದು ಕೂರಿಸಿಕೊಳ್ಳುವ ಈ ಚಾನೆಲ್ ಗಳು ಅವರನ್ನು “ಇಂಟರಾಗೇಟ್” ಮಾಡಿ, ಅವರ ಬಾಯಿಂದ ಬರಬಾರದ್ದನ್ನು ಬರಿಸಿ, ಅದನ್ನೇ “ಬ್ರೇಕಿಂಗ್ ನ್ಯೂಸ್” ಮಾಡುತ್ತಾರೆ. ಮಜವಾದ ವಿಷಯವೆಂದರೆ, ಪ್ಯಾನಲ್ ಡಿಸ್ಕಷನ್ ಗಳಲ್ಲಿ ರಾಜಕಾರಣಿಗಳು, ಪತ್ರಕರ್ತರ ಜೊತೆಗೆ ಪುಂಗು ಜ್ಯೋತಿಷಿಗಳನ್ನೂ ಕರೆಸುತ್ತಿದ್ದಾರೆ.

ಆ ಜ್ಯೋತಿಷಿಗಳು ಸಿಎಂ ಕುಮಾರಸ್ವಾಮಿಯವರ ಹುಟ್ಟಿದ ದಿನ, ವಾರ, ನಕ್ಷತ್ರಗಳ ಆಧಾರದ ಮೇಲೆ ಭವಿಷ್ಯ ನುಡಿಯುತ್ತಿದ್ದಾರೆ. ಅದನ್ನೇ ನಮ್ಮ ಜನ ಕೇಳುತ್ತಿದ್ದಾರೆ. ಇಷ್ಟಕ್ಕೇ ಚಾನೆಲ್ ಗಳು ತಾವೇ ಚುನಾವಣೆ ಗೆದ್ದೇವೆಂಬಂತೆ ಬೀಗುತ್ತಿದ್ದಾರೆ. ಈ “ಬೀಗಾಟ” ಹೆಚ್ಚು ಕಾಲ ನಡೆಯೋದಿಲ್ಲ ಎಂಬುದು ಇಷ್ಟರಲ್ಲೇ ಗೊತ್ತಾಗಲಿದೆ. ಅಲ್ಲೀವರೆಗೂ ಅದೇನು ಕಿಸಿಯುತ್ತವೋ ಈ ಚಾನೆಲ್ ಗಳು ಕಿಸಿಯಲಿ ಬಿಡಿ ಎಂದು ಜನ ಗೊಣಗುತ್ತಿದ್ದಾರೆ.

 

Tags: , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.