MENU

ದಾದಾಗಿರಿಯ ದಿನಗಳು

ಸರಿದಾರಿಗೆ ತರಲು ಸದಾವಕಾಶ…

June 11, 2018 ಪ್ರಚಲಿತ, ಬೆಂಗಳೂರು, ಮನರಂಜನೆ, ಯುವಜನ, ಸಂಗೀತ, ಸಿನಿಮಾ

‘ಅಮ್ಮಾ ಐ ಲವ್‌ ಯೂ’.

ಕಾಶಿನಾಥ್ ರವರ ಇಮೇಜ್ ಬದಲಿಸಿದ ಚಿತ್ರ ಚೌಕ. ಆ ಚಿತ್ರದಲ್ಲಿನ ಅಪ್ಪಾ ಐ ಲವ್ ಯು ಪ್ಪಾ… ಎನ್ನುವ ಹಾಡು ಎಂತಹವರಲ್ಲಿಯೂ ಕಂಬನಿ ಜಾರಿಸದೇ ಇರದ. ಆ ಮಟ್ಟಿಗೆ ಆ ಹಾಡು ಎಲ್ಲರ ರಿಂಗ್ ಟೋನ್, ಕಾಲರ್ ಟೋನ್, ಇತ್ಯಾದಿಗಳಲ್ಲಿ ಜಗಮಗಿಸಿದ್ದೂ ಉಂಟು.
ಈಗ ಅಮ್ಮಾ ಐ ಲವ್ ಯು ಹೊಸ ಟ್ರೆಂಡ್ ಶುರುವಾಗಿದೆ.

ಚಿರಂಜೀವಿ ಸರ್ಜಾ ಮತ್ತು ನಿಶ್ವಿಕಾ ನಾಯ್ಡು ನಟನೆಯ ಚಿತ್ರ ‘ಅಮ್ಮಾ ಐ ಲವ್‌ ಯೂ’. ಈ ಚಿತ್ರದಲ್ಲಿ ಅಮ್ಮ ಮಗನ ಸೆಂಟಿಮೆಂಟ್‌ ಹೈಲೈಟ್‌. ಚಿತ್ರದ ಹಾಡುಗಳಿಗೆ ಕ್ಲಾಸಿಕಲ್‌ ಟಚ್‌ ಕೊಟ್ಟಿದ್ದಾರೆ ಸಂಗೀತ ನಿರ್ದೇಶಕ ಗುರುಕಿರಣ್‌. ಈ ಚಿತ್ರಕ್ಕಾಗಿ ನಾಗೇಂದ್ರ ಪ್ರಸಾದ್‌ ಎರಡು ಹಾಡುಗಳನ್ನು ಬರೆದಿದ್ದಾರೆ. ‘ಅಮ್ಮಾ ಐ ಲವ್‌ ಯೂ’ ಹಾಡು 4 ಲಕ್ಷ ಹಿಟ್‌ ಗಳಿಸಿದೆ. ವಿಶೇಷ ಅಂದರೆ ಈ ಹಿಂದೆ ದ್ವಾರಕೀಶ್‌ ನಿರ್ಮಾಣದ 50ನೇ ಚಿತ್ರಕ್ಕೆ ಅಪ್ಪಾ ಐ ಲವ್‌ ಯೂ ಎಂಬ ಹಾಡನ್ನು ಅವರೇ ಬರೆದಿದ್ದರು.

ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ದ್ವಾರಕೀಶ್‌ ಮತ್ತು ಗುರುಕಿರಣ್‌ ಜಂಟಿಯಾಗಿ ಪ್ರಾರಂಭಿಸಿರುವ ಡಿಜಿಕೆ ಆಡಿಯೋ ಕಂಪನಿ ಮೂಲಕ ಧ್ವನಿ ಸುರಳಿಯನ್ನು ಹೊರತರಲಾಗಿದೆ.

ಹಾಡುಗಳ ಇನ್ನೊಂದು ವಿಶೇಷವೆಂದರೆ, ತೆಲುಗಿನ ಜನಪ್ರಿಯ ಸಿಂಗರ್‌ ಸುನಿಲ್‌ ಕಶ್ಯಪ್‌ ಅಮ್ಮಾ ಐ ಲವ್‌ ಯೂ ಗೀತೆ ಹಾಡಿದ್ದಾರೆ. ಇದನ್ನು ಪ್ರೋಮೋದಲ್ಲಿ ಕೇಳಿದ ನಟ, ಮ್ಯುಸಿಷಿಯನ್‌ ಸಾಧು ಕೋಕಿಲ ‘ನಾನೇ ಈ ಹಾಡನ್ನು ಹಾಡಬೇಕು’ ಎಂದು ಹಠ ಹಿಡಿದು ಹಾಡಿದ್ದಾರೆ. ಕೊನೆಗೆ ಇಬ್ಬರೂ ಹಾಡಿರುವುದನ್ನು ಕಂಬೈನ್‌ ಮಾಡಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಉಳಿದ ಗೀತೆಗಳು ಮಹಾಲಕ್ಷ್ಮಿ ಅಯ್ಯರ್‌, ಸಂತೋಷ್‌ ವೆಂಕಿ, ಜ್ಯೋತಿಕಾ ರಾಧಾಕೃಷ್ಣನ್‌, ಮೈಸೂರಿನ ಚಿಂತನ್‌ ವಿಕಾಸ್‌ ದನಿಯಲ್ಲಿ ಮೂಡಿ ಬಂದಿವೆ. ಅಮ್ಮಾ ಐ ಲವ್‌ ಯೂ ಚಿತ್ರದಲ್ಲಿ ಸಿತಾರಾ ಅಮ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಅಮ್ಮ ಮಗನ ನಡುವಿನ ಬಾಂಧವ್ಯದ ಜತೆ ಲವ್‌ ಸ್ಟೋರಿ ಕೂಡ ಇದೆ.

Tags: , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.