MENU

ದಾದಾಗಿರಿಯ ದಿನಗಳು

fake ‘ದರ್ಶನ’….

June 14, 2018 ಪ್ರಚಲಿತ, ಪ್ರವಾಸ, ಬೆಂಗಳೂರು, ಮನರಂಜನೆ, ಯುವಜನ, ಸಿನಿಮಾ

ದುಬಾರಿ ಆರ್ಯ…

ಗೆಲುವಿನ ಕುದುರೆಗೆ ಹೆಚ್ಚೆಚ್ಚು ದುಡ್ಡು ಸುರಿಯುವ ಚಾಳಿ ಇಂದು, ನಿನ್ನೆಯದಲ್ಲ. ಈ ಮಾತು ಎಲ್ಲ ಕ್ಷೇತ್ರ, ವಿಷಯ, ವಿಚಾರಕ್ಕೂ ಅನ್ವಯ.  ಅಂತಹ ಪ್ರಮುಖ ವಿಚಾರಗಳಲ್ಲಿ ಸಿನಿಮಾ ರಂಗವೂ ಒಂದು.

ಒಂದರ ಹಿಂದೆ ಒಂದು ಎಂಬಂತೆ ಹಿಟ್ ಚಿತ್ರಗಳನ್ನು ಕೊಟ್ಟ ಮಾತ್ರಕ್ಕೆ ಹೊಸ ನಟನೂ ಸ್ಟಾರ್ ಪಟ್ಟವನ್ನು ಅಲಂಕರಿಸುತ್ತಾನೆ. ಅವನಿಂದ ಹೆಚ್ಚೆಚ್ಚು ಲಾಭ ಮಾಡಿಕೊಳ್ಳಬಹುದೆಂಬ ವಿಚಾರ ನಿರ್ಮಾಪಕರಿಗೆ ಗೊತ್ತಾದ ಮಾರನೇ ದಿನದಿಂದಲೇ ಆ ನಟನ ಸಲುವಾಗಿ ಕೋಟ್ಯಾಂತರ ರೂಪಾಯಿಗಳನ್ನು ಇನ್ವೆಸ್ಟ್ ಮಾಡುವುದಕ್ಕೆ ರೆಡಿ ಇರುವ ಪ್ರೊಡ್ಯೂಸರ್ಸ್ ಗಳಿಗೇನು ಕಡಿಮೆ ಇಲ್ಲ. ಮೊದಲೆಲ್ಲಾ ಇದು ಬಾಲಿವುಡ್ ಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಸ್ಯಾಂಡಲ್ ವುಡ್, ಟಾಲಿವುಡ್ ಗಳಿಗೆಲ್ಲಾ ಲಗ್ಗೆ ಇಡುತ್ತಿರುವುದು ಆಶ್ಚರ್ಯದ ಸಂಗತಿ.

ಸದ್ಯದ ವಿಚಾರ ಏನಪ್ಪ ಅಂದ್ರೆ  ಟಾಲಿವುಡ್ ನಟ ಅಲ್ಲು ಅರ್ಜುನ್ ಕೂಡ ಇದೇ ವಿಚಾರಕ್ಕೆ ಈಗ ಸುದ್ದಿಯಾಗಿದ್ದಾರೆ. ಈಗಾಗಲೇ ಆರ್ಯ, ಆರ್ಯ 2, ಹ್ಯಾಪಿ, ಬನ್ನಿ, ಬದ್ರಿನಾಥ ಇತರ ಅನೇಕ ಚಿತ್ರಗಳನ್ನು ನೀಡಿ ತೆಲುಗಿನ ಬಹು ಬೇಡಿಕೆಯ ನಟರಲ್ಲೊಬ್ಬರಾಗಿರುವ ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರ ಬರೋಬ್ಬರಿ 100 ಕೋಟಿ ರೂ. ಮೊತ್ತದಲ್ಲಿ ಸಿದ್ಧಗೊಳ್ಳಲಿದೆಯಂತೆ.

‘ನಾ ಪೇರು ಸೂರ್ಯ’ ಚಿತ್ರದ ಯಶಸ್ಸಿನ ನಂತರ ಅವರು ಯಾವ ಚಿತ್ರ ಒಪ್ಪಿಕೊಳ್ಳಲಿದ್ದಾರೆ ಎಂಬ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಆದರೂ ಖ್ಯಾತ ನಿರ್ದೇಶಕ ವಿಕ್ರಮ್ ಕುಮಾರ್ ಜತೆ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 100 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿದೆ ಎಂಬ ವಿಚಾರ ಟಾಲಿವುಡ್ ಅಂಗಳದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಆರ್ಯ ಸದ್ಯ ಪ್ಯಾರಿಸ್ ಪ್ರವಾಸದಲ್ಲಿದ್ದಾರೆ. ಅವರು ಭಾರತಕ್ಕೆ ವಾಪಸಾದ ನಂತರದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿದೆಯಂತೆ. ಸದ್ಯ ಕಥೆ ಕೇಳಿರುವ ಬನ್ನಿ, ಅದನ್ನು ಇಷ್ಟ ಪಟ್ಟಿದ್ದಾರಂತೆ. ಇಷ್ಟು ದೊಡ್ಡ ಮೊತ್ತದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿರುವುದರಿಂದ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

 

Tags: , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.