MENU

ದುಬಾರಿ ಆರ್ಯ…

ಒಳಗೂ ಬಯಲು ಹೊರಗೂ ಬಯಲು

June 14, 2018 ಕ್ರೈಂ, ಪ್ರಚಲಿತ, ಬೆಂಗಳೂರು, ಮನರಂಜನೆ, ಯುವಜನ, ರಾಜ್ಯ, ಸಿನಿಮಾ, ಹವ್ಯಾಸ

fake ‘ದರ್ಶನ’….

ತ್ತೀಚಿಗಂತು ಈ ಸೋಶಿಯಲ್ ಮೀಡಿಯಾನ ಹಾವಳಿ ಹೆಚ್ಚಾಗಿ ಲೆಕ್ಕವಿಲ್ಲದಷ್ಟು ಕೊಲೆ, ಅವಮಾನ, ಅಪರಾಧ ಪ್ರಕರಣಗಳು ನಡೆಯುತ್ತಿರುವುದು ದೌರ್ಬಾಗ್ಯದ ಸಂಗತಿ. ಸಿಗುವ ತಂತ್ರಜ್ಞಾನವನ್ನು ಒಳ್ಳೆಯ ಸಂಗತಿಗಳಿಗಾಗಿ ಉಪಯೋಗಿಸಿಕೊಳ್ಳದೇ ತೀರಾ ಕೆಳಮಟ್ಟದ ಕಾರ್ಯ ಚಟುವಟಿಕೆಗಳನ್ನು ಕಾನೂನಿನ ಕಣ್ಣಿಗೆ ಮಣ್ಣೆರಚುತ್ತಾ ನಡೆಯುತ್ತಿರುವ ಗುಂಪು ಈ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿ ಸಾಕಷ್ಟು ಅಪವಾದಗಳಿಗೆ ಗುರಿಯಾಗಿದೆ.

ಇನ್ನು ಸಮಾಜದಲ್ಲಿ ಉತ್ತಮ ಹೆಸರು ಗಳಿಸಿರುವಂತಹ ವ್ಯಕ್ತಿಗಳು, ಸೆಲೆಬ್ರೆಟಿಗಳು, ರಾಜಕಾರಣಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿ ತಮ್ಮ ಫಾಲೋವರ್ಸ್ ಗಳೊಂದಿಗೆ ಸಂಪರ್ಕದಲ್ಲಿರುವುದು ಕಾಮನ್ ಸಂಗತಿ, ಇತ್ತೀಚಿಗೆ ಹೆಚ್ಚಾಗಿದೆಯೂ ಕೂಡಾ. ಅದನ್ನೇ ಎನ್ ಕ್ಯಾಶ್ ಮಾಡಿಕೊಳ್ಳುವ ಕಿಡಿಕೇಡಿಗಳು ಅಂತಹ ಸೆಲೆಬ್ರೆಟಿಗಳು, ರಾಜಕಾರಣಿಗಳು, ಹೆಸರಾಂತ ವ್ಯಕ್ತಿಗಳ ಹೆಸರಿನ ಫೇಕ್ ಅಕೌಂಟ್ ಗಳನ್ನು ಕ್ರಿಯೇಟ್ ಮಾಡುವ ಮುಖಾಂತರ, ಇಲ್ಲವೇ ಅವರದೇ ಅಕೌಂಟ್ ಗಳನ್ನು ಹ್ಯಾಕ್ ಮಾಡುವ ಮುಖಾಂತರವಾಗಿ ಅಭಿಮಾನಿಗಳ ಜೊತೆ ಅಸಭ್ಯ ವರ್ತನೆ ತೋರುವ, ಸಮಾಜಕ್ಕೆ ತಪ್ಪು ಸಂದೇಶ ನೀಡುವಂತಹ ವಿಚಾರಗಳನ್ನು ಹಂಚಿಕೊಳ್ಳುವ ಕೆಲಸಗಳನ್ನು ಮಾಡುವ ಮುಖಾಂತರ ಆಯಾ ವ್ಯಕ್ತಿಗಳ ಹೆಸರಿಗೆ ಮಸಿ ಬಳಿಯುವ ಜೊತೆಗೆ ವಿಕೃತ ಉನ್ಮಾದದಲ್ಲಿ ತೊಡಗುತ್ತಿದ್ದಾರೆ. ಅದೂ ಕಾನೂನು ಬಾಹಿರವೂ ಕೂಡಾ. ಆ ನಿಟ್ಟಿನಲ್ಲಿ ಅನೇಕ ಪ್ರಕರಣಗಳನ್ನು ದಾಖಲಿಸಿ, ಕಿಡಿಗೇಡಿಗಳನ್ನು ಹಿಡಿಯುವಲ್ಲಿಯೂ ಸೈಬರ್ ಕ್ರೈಂ ವಿಭಾಗ ಸುಸ್ತಾಗಿರುವುದು ಅಷ್ಟೇ ಸತ್ಯ.

ಶಾಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ ಅಂತಹ ಕಿಡಿಗೇಡಿಗಳ ಶಾಪಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೇ ಸ್ವತಃ ಗುರಿಯಾಗಿರುವುದು… ಅಭಿಮಾನಿಗಳಿಗೆ ಮಾಹಿತಿ ನೀಡುವ ಸಲುವಾಗಿ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಸಕ್ರಿಯರಾಗಿರುತ್ತಾರೆ. ಆದರೆ ಇತ್ತೀಚಿಗೆ ದರ್ಶನ್ ಫೇಸ್ ಬುಕ್ ಅಕೌಂಟ್ ನ ಹಿಂಬಾಲಕರೇ ಬೆಚ್ಚುವಂತಹ ಸಂಗತಿಗಳು ಬೆಳಕಿಗೆ ಬಂದಿದೆ.

ಮಾನ್ಯ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಮನಬಂದಂತೆ ಗೀಚಿದ ಬರಹಗಳು ಫೇಸ್​ಬುಕ್​ನಲ್ಲಿ ದರ್ಶನ್ ಅಕೌಂಟ್ ನಲ್ಲಿ  ರಾರಾಜಿಸಿವೆ. ಸ್ವಲ್ಪ ಪರಿಶೀಲಿಸಿ ನೋಡಿದ ಬಳಿಕ ಗೊತ್ತಾಗಿದ್ದೇನೆಂದರೆ ಅದು ದರ್ಶನ್ ಹೆಸರಲ್ಲಿ ಸೃಷ್ಟಿಯಾಗಿರುವ ನಕಲಿ ಖಾತೆಯ ಕಿತಾಪತಿ! ಅದನ್ನು ಕಂಡು ಸ್ವತಃ ದರ್ಶನ್ ಕೋಪಗೊಂಡಿದ್ದಾರೆ. ‘ಇತ್ತೀಚೆಗೆ ತಿಳಿದುಬಂದಿರುವಂತೆ ನನ್ನ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳ ಅನೇಕ ನಕಲಿ ಫೇಸ್​ಬುಕ್ ಖಾತೆಗಳಿವೆ. ಈ ಖಾತೆಗಳಿಂದ ಕೆಲವು ವ್ಯಕ್ತಿಗಳ ಮೇಲೆ ಅವಹೇಳನಕಾರಿ ಹೇಳಿಕೆಗಳು ನೀಡುವುದು ನಮ್ಮ ಗಮನಕ್ಕೆ ಬಂದಿದೆ. ಈ ರೀತಿ ಸೋಷಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೈಬರ್ ಕ್ರೖೆಮ್ ಡಿಪಾರ್ಟ್ ಮೆಂಟ್​ನವರು ಹೇಳಿದ್ದಾರೆ. ದಯಮಾಡಿ ಯಾರೂ ಇಂಥ ಕೆಲಸಗಳಲ್ಲಿ ತೊಡಗಬೇಡಿ ಎಂಬುದು ನನ್ನ ಕಳಕಳಿಯ ವಿನಂತಿ’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ಸುಲಭವಾಗಿ ಸಿಗುವ ತಂತ್ರಜ್ಞಾನವನ್ನು ನಮ್ಮ ಉಪಯೋಗಕ್ಕೆ, ಒಳಿತಿಗೆ ಬಳಸಿಕೊಳ್ಳುವ ಬದಲು ತಾನೂ ಹಾಳಾಗುವುದಲ್ಲದೇ, ಪ್ರತಿಷ್ಟಿತರ ಹೆಸರನ್ನು ಹಾಳುಗೆಡವುವ ಪೈಶಾಚಿಕತೆ ವಿಕೃತರಲ್ಲಿ ಮೂಡುತ್ತಿರುವುದು ಮನುಷ್ಯನ ಅರ್ಧಃಪತನದ ಮುನ್ಸೂಚನೆ ಇರಬೇಕು….

Tags: , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.