MENU

ಒಳಗೂ ಬಯಲು ಹೊರಗೂ ಬಯಲು

ದಾದಾಗಿರಿಯ ದಿನಗಳು

June 19, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಕಾಡುವ ‘ದೆವ್ವ’ಗಳು – 2

ನ್ನೊಂದನೆಯ ಶತಮಾನದಲ್ಲಿ ಕನ್ನಡ, ಪರ್ಷಿಯನ್ ಮುಂತಾದ ಭಾಷೆಗಳಲ್ಲಿ ನಡೆದ ಹುಡುಕಾಟ ಟಿಬೇಟಿಯನ್ ಭಾಷೆಯಲ್ಲೂ ಜರುಗಿದೆ. ಎಲ್ಲ ಪ್ರಾಂತ್ಯಗಳಲ್ಲಿನ ಎಲ್ಲ ಭಾಷೆಗಳಲ್ಲಿ ನಡೆಯುವ ಹುಡುಕಾಟಗಳನ್ನು ಗಮನಿಸುವುದು ನಮ್ಮ ಪಯಣದಲ್ಲಿ ಬಹು ಮುಖ್ಯ. ಆಗ ನಮಗೆ ಎಲ್ಲ ಮೂಲಗಳಿಂದಲೂ ಹೊಳಹುಗಳ ದರ್ಶನವಾಗತೊಡಗುತ್ತದೆ.
ಅಷ್ಟು ಹೊತ್ತಿಗೆ ಟಿಬೇಟ್‍ನಲ್ಲಿ ಬೌದ್ಧಿಕ ಧರ್ಮ ಸಾಕಷ್ಟು ಹರಡಿದ್ದರೂ, ಅದು ಸಂಸ್ಕøತ ಮತ್ತು ಪಾಲಿ ಮೂಲಗಳ ಬುದ್ಧ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಬುದ್ಧ ಪೂರ್ವದ ಸ್ಥಳೀಯ ನಂಬಿಕೆಗಳು ಮತ್ತು ಆಚರಣೆಗಳನ್ನು ಬುದ್ಧ ಧರ್ಮದೊಡನೆ ಸಂಯೋಜಿಸಿ ಅದರದೇ ಆದ ಬಲಿಷ್ಠ ಧರ್ಮ ಬೇರೂರತೊಡಗಿತ್ತು. ಅದು ಸಮರ್ಥವಾಗಿ ವ್ಯಕ್ತವಾಗಿರುವುದು ಒಬ್ಬ ಮಹಾನ್ ಮಹಿಳಾ ಸಾಧಕಿಯ ಕೃತಿಯಲ್ಲಿ. ಆಕೆಯ ಹೆಸರನ್ನು ಏನು ಮಾಡಿದರೂ ಕನ್ನಡದಲ್ಲಿ ಉಚ್ಚರಿಸಲು ಸಾಧ್ಯವೇ ಇಲ್ಲದಿರುವುದರಿಂದ ಇಂಗ್ಲಿಷ್‍ನಲ್ಲೆ ಹೇಳಬೇಕಿದೆ; Ma.gublab.sgron! ಅದನ್ನು ಪಶ್ಚಿಮದವರು ಸರಳಗೊಳಿಸಿ MachigLabdron ಎಂದು ಕರೆಯುತ್ತಾರೆ! ಟಿಬೇಟಿಯನ್ನರ ಬಗ್ಗೆ ನಮಗೆ ತಿಳಿವಳಿಕೆಯಿದ್ದರೂ ಅವರುಗಳ ಹೆಸರುಗಳು ಖಂಡಿತವಾಗಿಯೂ ನಮಗೆ ತಾಗಿರುವುದಿಲ್ಲ. ‘ತೆಂಜಿನ್ ಗ್ಯಾಟ್ಸೊ’ ಹೆಸರನ್ನು ನಾವು ಕೇಳಿರುವುದು ಕಡಿಮೆ. ಆದರೆ ಅವರು ನಮಗೆ ಗೊತ್ತು. ಹದಿನಾಲ್ಕನೆಯ ‘ದಲೈಲಾಮ!’ (ಈ ಕ್ಷಣದ ಅಸಾಮಾನ್ಯ ಸಾಧಕರಲ್ಲಿ ಅವರೂ ಒಬ್ಬರು. ಮುಂದೊಮ್ಮೆ ಅವರನ್ನು ಕುರಿತು ದಾಖಲಿಸುತ್ತೇನೆ)
***
ಮಾಚಿಗ್ ನಮ್ಮ ಅಕ್ಕಮಹಾದೇವಿ ಮತ್ತು ಸೂಫಿ ರಬಿಯಾಳಂತೆ. ಅವರಂತೆಯೆ ಆಧ್ಯಾತ್ಮಿಕ ಪಥದಲ್ಲಿ ತೀರ ಆಳದಲ್ಲಿ ಸಂಚರಿಸಿರುವವಳು. ‘ಬಯಕೆಗಳಿಂದ ಕಳಚಿಕೊಳ್ಳುವ ಪಂಥ’ದ ಪ್ರಮುಖ ಧ್ವನಿ ಅವಳು. ಅಲ್ಲಿ ‘ಬಯಕೆ’ ಪದಕ್ಕೆ ಪರ್ಯಾಯವಾಗಿ ‘ದೆವ್ವ’ ಪದ ಬಳಕೆಯಾಗುತ್ತದೆ. ಎಷ್ಟು ಬಗೆಯ ದೆವ್ವಗಳಿವೆ, ಅವುಗಳ ಸ್ವರೂಪಗಳೇನು ಮತ್ತು ಅವುಗಳಿಂದ ಕಳಚಿಕೊಳ್ಳುವುದು ಹೇಗೆ ಎನ್ನುವುದನ್ನು ಕುರಿತು ಸಾಕಷ್ಟು ಮಾತನಾಡುತ್ತಾಳೆ. ಅವಳ ಬೋಧನೆಗಳ ಹಲವು ಪದ್ಯಗಳು ನನ್ನನ್ನು ಸಾಕಷ್ಟು ಸೆಳೆದಿವೆ. ನಾನು ಅವನ್ನು ಓದಿರುವುದು ಇಂಗ್ಲಿಷಿನಲ್ಲಿ. ಅವುಗಳನ್ನು ಹಾಗೆಯೆ ನಿಮ್ಮೆದುರಿಗಿಟ್ಟು, ನಂತರ ನಮ್ಮ ಭಾಷೆಯಲ್ಲಿ ವಿವರಿಸಬಯಸುತ್ತೇನೆ.

The root of all demons is one’s own mind.

If one feels attraction and desire

in the perception of any phenomenon,

one is captured by the demons.

When the mind grasps at phenomena

as if they were external objects

one becomes contaminated.

 

ಎಲ್ಲ ದೆವ್ವಗಳ ಮೂಲ ನಮ್ಮ ಮನಸ್ಸು. ಯಾವುದೆ ಬಗೆಯ ವಿಷಯ ಹುಟ್ಟಿಸುವ ಬಯಕೆ, ಲಾಲಸೆಗಳು ನಮ್ಮನ್ನು ದೆವ್ವಗಳ ಹಿಡಿತಕ್ಕೆ ದೂಡುತ್ತವೆ. ನಮ್ಮ ಹೊರಗಿನ ವಿಷಯಗಳಿಗೆ, ಬಯಕೆಗಳಿಗೆ ವಸ್ತುಗಳೆನ್ನುವ ರೀತಿಯಲ್ಲಿ ನಾವು ಅಂಟಿಕೊಂಡಾಗ ನಾವು ಕಲುಷಿತಗೊಳ್ಳತೊಡಗುತ್ತೇವೆ.
ಬಯಕೆಗಳು ಒಂದು ವಿಧದಲ್ಲಿ ನಮ್ಮನ್ನು ಕಾಡುವುದಿಲ್ಲ. ಹೊರಗೆ ಒಳಗೆ ಎಲ್ಲ ಕಡೆಯಿಂದಲೂ ನಮ್ಮನ್ನು ಕೆಣಕುತ್ತಿರುತ್ತವೆ. ಆವರಿಸುತ್ತಿರುತ್ತವೆ. ನಮಗರಿವಿಲ್ಲದಂತೆ ನಾವು ಮಲಿನರಾಗುತ್ತಾ ಹೋಗುತ್ತೇವೆ ‘ಮಲಪೂರಿತ’ರಾಗುತ್ತೇವೆ. ದೇಹ ಸ್ನಾನ ಮಾಡುತ್ತಿರುತ್ತದೆ; ಮನಸ್ಸು ಕೊಳೆಯುತ್ತಾ ಹೋಗುತ್ತದೆ.

The demons are divided into four categories;

the tangible demons (where basis is external objects)

the intangible demons (where basis is mental images)

the demons of complacency

(where basis is the desire for obtainment)

and the demon of pride

(where basis is dualistic discrimination)

ದೆವ್ವಗಳಲ್ಲಿ ನಾಲ್ಕು ವಿಧ: ಕಾಣುವ ದೆವ್ವಗಳು; ಕಾಣದ ದೆವ್ವಗಳು; ತೃಪ್ತಿ ಹುಟ್ಟಿಸುವ ದೆವ್ವಗಳು ಮತ್ತು ಅಹಂ ಪ್ರೇರೇಪಿಸುವ ದೆವ್ವಗಳು.
ವಸ್ತು ಸಮುಚ್ಛಯದಿಂದ ಕಾಣುವ ದೆವ್ವಗಳು ಅವಿರ್ಭವಿಸಿದರೆ, ಕಾಣದ ದೆವ್ವಗಳಿಗೆ ಮನೋಚಿತ್ರಗಳು ಕಾರಣ. ನಾನು ಬಯಸಿದ್ದು ನನಗೆ ದೊರಕುತ್ತಾ ಹೋದ ಹಾಗೆ ನನ್ನಲ್ಲಿ ತೃಪ್ತಿಯನ್ನುಂಟು ಮಾಡುವ ದೆವ್ವವೂ
ಬಲಿಯುತ್ತಾ ಹೋಗುತ್ತದೆ. ಮತ್ತು ಸಮಚಿತ್ತವನ್ನು ಕಳೆದುಕೊಂಡು ನಾವು ಬೆಳೆಸಿಕೊಳ್ಳುವ ದ್ವಂದ್ವ ಧೋರಣೆಗಳಿಂದಾಗಿ ಅಹಂನ ದೆವ್ವ ಕಾಡುತ್ತಾ ಹೋಗುತ್ತದೆ.
ಮಾಚಿಗ್ ಹೇಳುವಂತೆ ನಮ್ಮ ಹೊರಗಿನ ವಸ್ತುಗಳು ಮತ್ತು ಮನಸ್ಸಿನಲ್ಲಿ ದೈತ್ಯಾಕಾರವಾಗಿ ಬೆಳೆಯುತ್ತಾ ಹೋಗುವ ಅಹಂ ನಮ್ಮ ಆಂತರ್ಯವನ್ನು ಕಲ್ಮಶಗೊಳಿಸುತ್ತಾ ಸಾಗುತ್ತದೆ. ಒಂದು ಹಂತದ ನಂತರ ನಾವು ಆ ದೈತ್ಯ ದೆವ್ವಗಳ ಹಿಡಿತದಿಂದ ಕಳಚಿಕೊಳ್ಳುವುದಕ್ಕೆ ಸಾಧ್ಯವೆ ಇಲ್ಲದಂತಹ ಹಂತವನ್ನು ತಲುಪಿಬಿಡುತ್ತೇವೆ.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.