MENU

ದಾದಾಗಿರಿಯ ದಿನಗಳು

ಒಳಗೂ ಬಯಲು ಹೊರಗೂ ಬಯಲು

June 19, 2018 ಜೋಕು-ಟಾಕು, ಪ್ರಚಲಿತ, ಬೆಂಗಳೂರು, ಯುವಜನ, ರಾಜಕೀಯ, ರಾಜ್ಯ, ರಾಷ್ಟ್ರೀಯ

ಕಮಲಾಂಗಿಗಳ ಕಿತ್ತಾಟ

ಡುಗೆ ಆಗುವವರೆಗೂ ಜೊತೆಗಿದ್ದು ಅಡುಗೆ ಆಗಿ ಕೆಟ್ಟರೆ ಮಾಡಿದ್ದು ನೀನು, ನಾನು ಎಂದು ಆರೋಪಿಸುವ ಮಟ್ಟಿಗೆ ಬಿಜೆಪಿಯಲ್ಲಿ ಕೊಂಚ ಇರುಸು ಮುರುಸು ಉಂಟಾಗಿದೆ. ಮೇ 12ರ ಚುನಾವಣೆಯಾದ ನಂತರ, ಕಾರಣಾಂತರಗಳಿಂದ ಜಯನಗರ, ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ಮುಂದೂಡಲ್ಪಟ್ಟಿತ್ತು. ಅದಕ್ಕನುಗುಣವಾಗಿ ಆಯಾ ಪಕ್ಷದ ಧುರೀಣರನ್ನು ಆ ಕ್ಷೇತ್ರದ ಉಸ್ತುವಾರಿಗಾಗಿ ನೇಮಿಸಲಾಗಿತ್ತು. ಅದರಂತೆ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ನಿಂದ ಹಾಲಿ ಶಾಸಕ ಮುನಿರತ್ನ ರವರೇ ಮುಂದುವರೆಯಲ್ಪಟ್ಟರೆ, ಜಯನಗರದಲ್ಲಿ ರಾಮಲಿಂಗಾರೆಡ್ಡಿಯವರ ಮಗಳು ಸೌಮ್ಯ ರಾಮಲಿಂಗಾರೆಡ್ಡಿ ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ.

ಅನಾರೋಗ್ಯ ಕಾರಣಗಳಿಂದ ಚುನಾವಣೆಯ ಸಮಯದಲ್ಲಿಯೇ ಹಠಾತ್ ನಿಧನರಾದ ಬಿಜೆಪಿಯ ಹಾಲಿ ಶಾಸಕ ವಿಜಯ್ ಕುಮಾರ್ ರವರ ಬದಲಿಗೆ ಅವರ ಸಹೋದರನಿಗೆ ಟಿಕೆಟ್ ನೀಡಲಾಗಿತ್ತು. ಪ್ರಚಾರದ ಕೊರತೆ, ಬಿಜೆಪಿಯ ಒಳಜಗಳ, ಹಾಗೂ ಆತುರದ ಟಿಕೆಟ್ ಹಂಚಿಕೆಯ ಕಾರಣದಿಂದ ಬಿಜೆಪಿಯು ಜಯನಗರದಲ್ಲಿ ಸೋಲನ್ನು ಅನುಭವಿಸಿದೆ ಎಂಬುದು ಸದ್ಯದ ಅಭಿಪ್ರಾಯವಾಗಿತ್ತು. ಆದರೀಗ  ಈ ಕುರಿತಂತೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೊಸ ಬಾಂಬನ್ನು ಸಿಡಿಸಿದ್ದಾರೆ.

ಬಿಜೆಪಿ ಪಕ್ಷದವರೇ ಆಗಿರುವ ಆರ್. ಅಶೋಕ್ ತಮ್ಮ ಪಕ್ಷದ ಪ್ರಭಾವಿ ನಾಯಕರ ವಿರುದ್ಧವೇ ಆರೋಪ ಮಾಡುತ್ತಿರುವುದು ಪಕ್ಷದ ಒಳಜಗಳಗಳನ್ನು ಎತ್ತಿ ತೋರಿಸುವಂತಿದೆ.

ಸದ್ಯದ ಶಾಕಿಂಗ್ ನ್ಯೂಸ್ ಏನಪ್ಪ ಅಂದ್ರೆ, ಜಯನಗರದಲ್ಲಿ ಬಿಜೆಪಿ ಸೋಲಿಗೆ ಆರ್. ಅಶೋಕ್ ರವರೇ ಕಾರಣ ಎಂಬ ಆರೋಪವಾಗಿದೆ.

ಇದೇ ಆರೋಪವನ್ನು ತಿರಸ್ಕರಿರುವ ಆರ್. ಅಶೋಕ್ ರವರು “ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಅಮಿತ್ ಷಾ ಕಾರ್ಯಕ್ರಮ ವಿಫಲಗೊಂಡಾಗ ಅಶೋಕ್ ಕಾರಣ ಎಂದವರು, ಅದೇ ಪ್ರಧಾನಿ ಮೋದಿ ಕಾರ್ಯಕ್ರಮ ನಿರೀಕ್ಷೆ ಮೀರಿ ಯಶಸ್ಸು ಕಂಡಾಗ ಅಶೋಕ್ ಕಾರಣ ಎಂದು ಹೇಳಲಿಲ್ಲ.

ಜಯನಗರ ವಿಧಾನಸಭೆ ಚುನಾವಣೆ ಸೋಲಿಗೆ ಮೊದಲು ಅನಂತ್​ಕುಮಾರ್​ ಅವರು ನೈತಿಕ ಹೊಣೆ ಹೊರಬೇಕು. ಆಮೇಲೆ ನಾನು ಹೊಣೆ ಹೊರುತ್ತೇನೆ. ಸೋಲಿಗೆ ನನ್ನ ಹೆಸರು ತಳಕು ಹಾಕಿಕೊಂಡಿರುವುದು ನನಗೆ ಬಹಳ ನೋವುಂಟು ಮಾಡಿವೆ” ಎಂದು ಆರ್. ಅಶೋಕ್ ತಮ್ಮ ಪಕ್ಷದ ವಿರುದ್ಧವೇ ದೂರಿದ್ದಾರೆ.

ಈ ಸೋಲಿಗೆ ಮೊದಲು ಅನಂತಕುಮಾರ್ ನೈತಿಕ ಹೊಣೆ ಹೊರಬೇಕು. ಆಮೇಲೆ ನಾನು ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಅನಾರೋಗ್ಯದಿಂದಾಗಿ ಜಯನಗರದಲ್ಲಿ ಅಂತಿಮ ಹಂತದ ಪ್ರಚಾರ ಮಾಡಲಿಲ್ಲ ಎಂದ ಅಶೋಕ್ ರವರು ಕ್ಷೇತ್ರದಲ್ಲಿ ನಾನೂ ಸೇರಿದ್ದಂತೆ ಎಲ್ಲ ನಾಯಕರು ಪ್ರಚಾರ ಮಾಡಿದ್ದೆವು. ಅಭ್ಯರ್ಥಿ ಆಯ್ಕೆ ವೇಳೆ ಗೊಂದಲ ಆಗಿದ್ದು ನಿಜ. ಆದರೆ, ಬೆಂಗಳೂರಿನ ನಾಯಕರಲ್ಲಿ ಯಾವುದೇ ವೈಮನಸ್ಸಿಲ್ಲ. ಅನಂತಕುಮಾರ, ಸದಾನಂದಗೌಡ, ಯಡಿಯೂರಪ್ಪ ನಾವೆಲ್ಲಾ ಒಂದಾಗಿದ್ದೇವೆ ಎಂದೂ ತಾವು ಮಾಡಿದ ಆರೋಪಗಳನ್ನು ಮರೆಮಾಚಿ ತೇಪೆ ಹಾಕುವಂತೆ ಮಾತನಾಡಿದರು. ಕೊನೆಗೆ ಬಿಜೆಪಿ ಜಯನಗರದಲ್ಲಿ ಸೋಲನ್ನು ಅನುಭವಿಸಿದರೂ ಸಹ ತಾವೇ ಸ್ವತಃ ಕ್ಷೇತ್ರ ಬಿಟ್ಟಂತೆ ಉದ್ಧಟತನದ ಮಾತುಗಳನ್ನಾಡಿದರು. ಹೀಗೆ ಕಮಲಾಂಗಿಗಳ ಕಿತ್ತಾಟ ಎಲ್ಲಿಗೆ ಮುಟ್ಟುವುದೋ ನೋಡಬೇಕು.

Tags: , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.