MENU

ದಾದಾಗಿರಿಯ ದಿನಗಳು

ದಾದಾಗಿರಿಯ ದಿನಗಳು

June 21, 2018 ಪ್ರಚಲಿತ, ಬೆಂಗಳೂರು, ಮನರಂಜನೆ, ಯುವಜನ, ಸಿನಿಮಾ

ಕಥೆ ಹೇಳಲಿರುವ ಟ್ಯಾಟು…..

ನ್ನಡ ಚಿತ್ರಗಳಲ್ಲಿ ಹಿಂದಿನಿಂದಲೂ ಹಚ್ಚೆ ಫೇಮಸ್. ಮೊದಲೆಲ್ಲ ಸಂಬಂಧಿಕರ, ಗೆಳೆಯರ, ಗೆಳತಿಯರ ವಗೇರೆ ವಗೇರೆ ಹೆಸರುಗಳನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಸಿನಿಮಾ ತೂಗುವ ಕಾಲ ಜೋರಾಗಿಯೇ ಇತ್ತು. ಆದರೀಗ ಅದೇ ಚಾಳಿ ಮುಂದುವರೆದರೂ ಟ್ರೆಂಡಿಂಗ್ ಚೇಂಜ್ ಆಗಿದೆ. ಹಚ್ಚೆ ಬದಲು ಟ್ಯಾಟು ಎಂಬ ಹೊಸ ಹೆಸರು ನಾಮಕರಣಗೊಂಡು ಅದೂ ಮುಂದುವರೆಯುತ್ತಿದೆ.

ಹಿಂದಿನ ಸಿನಿಮಾಗಳನ್ನು ನೆನೆದರೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ದನ್ ರವರ ಭಾವಚಿತ್ರದ ಟ್ಯಾಟು ಹೆಚ್ಚು ಫೇಮಸ್ ನ ಜೊತೆಗೆ ಟ್ರೆಂಡಿಂಗ್ ಅನ್ನು ಸೃಷ್ಟಿಸಿದ್ದ ವಿಚಾರವನ್ನ ಯಾರೂ ಮರೆತಿರಲಿಕಿಲ್ಲ.

ಆರಂಭದ ದಿನಗಳಿಂದಲೂ ಹಲವು ವಿಘ್ನಗಳನ್ನು ಎದುರಿಸಿದ್ದ ‘ತಾಯಿಗೆ ತಕ್ಕ ಮಗ’ ಚಿತ್ರ ಈಗ ಶೂಟಿಂಗ್ ಮುಗಿಸಿಕೊಂಡ ಖುಷಿಯಲ್ಲಿದೆ. ನಿರ್ಮಾಣದ ಜೊತೆಗೆ ನಿರ್ದೇಶನದ ಹೊಣೆಯನ್ನೂ ಕೃಷ್ಣಲೀಲ ಖ್ಯಾತಿಯ ಶಶಾಂಕ್ ಅವರೇ ವಹಿಸಿಕೊಂಡ ಬಳಿಕ ಈ ಸಿನಿಮಾದ ಕೆಲಸಗಳಿಗೆ ವೇಗ ದೊರಕಿದೆ.  ಹಿರಿಯ ನಟಿ ಸುಮಲತಾ ಅಂಬರೀಷ್ ಮತ್ತು ನಟ ಕೃಷ್ಣ ಅಜೇಯ ರಾವ್ ತಾಯಿ-ಮಗನಾಗಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಹೈಲೈಟ್. ಈ ಪಾತ್ರಗಳನ್ನು ಇನ್ನಷ್ಟು ತೀವ್ರವಾಗಿಸುವ ಸಲುವಾಗಿ ಟ್ಯಾಟೂ ಮೊರೆ ಹೋಗಿದ್ದಾರೆ ನಿರ್ದೇಶಕರು. ಅರ್ಥಾತ್, ಅಜೇಯ ರಾವ್ ಕೈ ಮೇಲೆ ಸುಮಲತಾ ಭಾವಚಿತ್ರ ಇರುವ ಹಚ್ಚೆ ಹಾಕಿಸಲಾಗಿದ್ದು, ಇದು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆಯಂತೆ.

ರಿಯಲ್ ಲೈಫ್​ನಲ್ಲಿಯೂ ಬಹುತೇಕ ಮಂದಿ ಕೈ ಮೇಲೆ ‘ಅಮ್ಮ’ ಎಂದು ಟ್ಯಾಟೂ ಹಾಕಿಸಿಕೊಂಡಿರುತ್ತಾರೆ. ಇನ್ನೂ ಕೆಲವರು ತಾಯಿ ಹೆಸರನ್ನು ಬರೆಸಿಕೊಂಡಿರುತ್ತಾರೆ. ಅಂಥ ಎಲ್ಲ ಪ್ರೇಕ್ಷಕರಿಗೂ ಇದು ಕನೆಕ್ಟ್ ಆಗಲಿದೆ ಎಂಬುದು ನಿರ್ದೇಶಕರ ಅಭಿಪ್ರಾಯ.

ಚಿತ್ರದ ಕಥೆ ಶುರುವಾಗುವಾಗಲೇ ನಾಯಕನ ಕೈ ಮೇಲೆ ಹಚ್ಚೆ ಇರಲಿದ್ದು, ಕಥೆಯಲ್ಲಿ ಅದು ಕೂಡ ಒಂದು ಪಾತ್ರದಂತೆ ಕಾರ್ಯ ನಿರ್ವಹಿಸಲಿದೆಯಂತೆ. ಹಲವು ದೃಶ್ಯಗಳಲ್ಲಿ ಈ ಟ್ಯಾಟೂ ಚೆನ್ನಾಗಿ ಚಿತ್ರಿತವಾಗಿದ್ದು ಉಳಿಕೆಯ ವಿಚಾರಗಳನ್ನು ಸಿನಿಮಾ ನೋಡಿ ತಿಳಿಯಬೇಕೆಂದು ನಿರ್ದೇಶಕರು ಜಾಣ ನಗೆ ಬೀರುತ್ತಾರೆ. ಚಿತ್ರೀಕರಣ ಮುಗಿದಿರುವುದರಿಂದ ಮುಂದಿನ ವಾರ ಡಬ್ಬಿಂಗ್ ಕೆಲಸಗಳು ಶುರುವಾಗಲಿವೆ. ಸೆಪ್ಟೆಂಬರ್ ವೇಳೆಗೆ ‘ತಾಯಿಗೆ ತಕ್ಕ ಮಗ’ನನ್ನು ತೆರೆಗೆ ತರುವ ಗುರಿ ಇಟ್ಟುಕೊಂಡು ಕೆಲಸ ಸಾಗುತ್ತಿದೆ. ಅಜೇಯಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ‘ಶಶಾಂಕ್ ಸಿನಿಮಾಸ್’ ಬ್ಯಾನರ್​ನಲ್ಲಿ ಚಿತ್ರ ತಯಾರಾಗುತ್ತಿದೆ. ಇನ್ನುಳಿದ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ‘ಭಜರಂಗಿ’ ಲೋಕಿ, ಸಾಧುಕೋಕಿಲ ಮುಂತಾದವರು ನಟಿಸಿದ್ದಾರೆ. ಶೇಖರ್​ಚಂದ್ರ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

 

 

Tags: , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.