MENU

ದಾದಾಗಿರಿಯ ದಿನಗಳು

ಒಳಗೂ ಬಯಲು ಹೊರಗೂ ಬಯಲು

June 22, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಏನಿದು ‘ಮನಸ್ಸು’? – 2

ಮುಂದುವರಿಸುತ್ತಾಳೆ ಮಾಚಿಗ್:

The manifestation of visible phenomena

can not be impeded.

but if they are considered as concrete

one’s vision manifests as light

In this way one is liberated from sight

sounds, tastes, odours, touch and the mind.

The mind, itself is the intangible demon.

on the other hand if it arises through the door of the five senses,

it is defined the tangible demon.

phenomena that appear to the sense organs

are instantaneously interrupted

in the sense of spontaneous liberation

and are trasformed in the great

essential dimension of reality.’

ಈ ಜಗತ್ತು ನಮಗೆ ಕಾಣುತ್ತಿದೆ. ಅದನ್ನು ಯಾರೂ ಹೇಳಿಕೊಡಬೇಕಿಲ್ಲ. ಯಾವುದೆ ಸಿದ್ಧತೆಯೂ ಇಲ್ಲದೆ ದೃಶ್ಯಗಳು ನಮಗೆ ಕಾಣುತ್ತವೆ. ಕಣ್ಣು ತೆರೆದಿದ್ದರೂ ಅಷ್ಟೆ. ಮುಚ್ಚಿದ್ದರೂ ಅಷ್ಟೆ. ನಮ್ಮೆದುರಿಗೆ ದೃಶ್ಯಗಳಿವೆ. ನಾವೂ ಸಹ ದೃಶ್ಯಗಳ ಭಾಗ ಆಕಾರ-ರೂಪಗಳ ದೃಶ್ಯವೆ. ಆದರೆ ಆ ದೃಶ್ಯಗಳನ್ನು ತಾಜಾ ಘನಗಳೆಂದು ಪರಿಗಣಿಸದೆ, ಬಯಲಿನ ಆಟವೆಂದು ಪರಿಗಣಿಸಿದಾಗ ನಮ್ಮೆದುರಿಗೆ ಅಪ್ಪಟ ಬೆಳಕು ಕಾಣತೊಡಗುತ್ತದೆ. ಅಕ್ಷರಶಃ ನಾವು ಮತ್ತು ನಮ್ಮನ್ನು ಸುತ್ತುವರಿದಿರುವ ಎಲ್ಲವೂ ಬೆಳಕಿನ ಛಾಯೆಗಳೆ. ಕತ್ತಲೂ ಸಹ ಆ ಬೆಳಕಿನ ಒಂದು ಮಹತ್ತರ ಭಾಗ. ಅದನ್ನು ಕುರಿತು ಧ್ಯಾನಿಸತೊಡಗಿದಾಗ ನಾವು ನಮ್ಮ ಇಂದ್ರಿಯಗಳ ಹಿಡಿತದಿಂದ ಇಂದ್ರಿಯಗಳಿಂದ ರೂಪುಗೊಂಡಿರುವ ದೆವ್ವದಿಂದ ಕಳಚಿಕೊಳ್ಳುತ್ತೇವೆ. ಹಾಗೆ ಕಳಚಿಕೊಳ್ಳಲು ನಮಗೆ ನೆರವಾಗುವ ಸಾಧನ ನಮ್ಮ ‘ಮನಸ್ಸು.’ ಮನಸ್ಸನ್ನು ಹದಗೊಳಿಸಿದಾಗ ಮಾತ್ರವೆ ಅಂತಹ ದೆವ್ವದಿಂದ ಕಳಚಿಕೊಳ್ಳಲು ಸಾಧ್ಯ. ಆದರೆ ‘ಮನಸ್ಸು’ ಎನ್ನುವುದು ಏನು ಗೊತ್ತೆ? ಅದೇ ಒಂದು ದೆವ್ವ! ಅಮೂರ್ತ ದೆವ್ವ!

‘The mind itself is the intangible demon’

ಎಂದು ಎಚ್ಚರಿಸುತ್ತಾಳೆ ಮಾಚಿಗ್. ನಿಮಗೆ ಈ ವಾಕ್ಯದಲ್ಲಿ ಅಲ್ಲಮ ಕಾಣಿಸುತ್ತಿದ್ದಾನಲ್ಲವೆ? ಮನಸ್ಸಿನಿಂದ ಎಲ್ಲವನ್ನೂ ಗೆದ್ದೆ ಎಂದು ಅಹಂಕಾರ ಪಡಬೇಡ ಎಂದು ಸಿದ್ಧರಾಮನಿಗೆ ‘ಶೂನ್ಯ ಸಂಪಾದನೆ’ಯಲ್ಲಿ ನೀಡುವ ಉಪದೇಶ ನಮಗೂ ನೀಡುತ್ತಿರುವ ಎಚ್ಚರಿಕೆ. ಏಕೆಂದರೆ ಅಲ್ಲಮನಿಗೆ ಮತ್ತು ಮಾಚಿಗ್‍ರಿಗೆ ತಿಳಿದಿದೆ: ಬಹಳಷ್ಟು ಸಾಧಕರು ಮನಸ್ಸಿನ ಹಂತದಲ್ಲೆ ನಿಂತುಬಿಟ್ಟಿರುತ್ತಾರೆ. ‘ಸಂಕಲ್ಪ ಶಕ್ತಿ’ಯನ್ನು ‘ಮಾನಸಿಕ ಶಕ್ತಿ’ಯೊಡನೆ ಸಮೀಕರಿಸಿಕೊಂಡಿರುತ್ತಾರೆ. ‘ಮಲ’ವೆಂದರೆ ಮನಸ್ಸಿನ ಕಲ್ಮಶವೆಂದು ನಂಬಿರುತ್ತಾರೆ. ಮನಸ್ಸು ತಿಳಿಯಾಗಿರಿಸಿಕೊಳ್ಳುವುದರ ಮೂಲಕ ವ್ಯಕ್ತಿತ್ವವನ್ನು ತಿಳಿಯಾಗಿಸಿಕೊಳ್ಳಬಹುದೆಂದು ತೀರ್ಮಾನಿಸಿರುತ್ತಾರೆ. ‘ಜ್ಞಾನ’ವೆಂದರೆ ಮನಸ್ಸಿನೊಳಗೆ ಅಡಕವಾಗಿರುವ ದ್ರವ್ಯವೆಂದು ಪರಿಗಣಿಸಿರುತ್ತಾರೆ. ಮನಸ್ಸಿನಿಂದ ಭಾಷೆಯನ್ನು ದುಡಿಸಿಕೊಳ್ಳುವ ಸಾಧ್ಯತೆಗಳನ್ನು ಕುರಿತು ಹಲವಾರು ಬಗೆಯ ಅಭಿಪ್ರಾಯಗಳನ್ನು ರೂಢಿಸಿಕೊಂಡಿರುತ್ತಾರೆ. ಅದರಿಂದ ಆಗಿರುವ ಅನಾಹುತವೆಂದರೆ, ಭಾಷೆಯೂ ಸಹ ಮನುಷ್ಯರ ಕೈಲಿರುವ ಒಂದು ಸಾಧನವಾಗಿಬಿಟ್ಟಿರುವುದು. ಗಾಳಿಯಲ್ಲಿ, ಬೆಂಕಿಯಲ್ಲಿ, ಆಕಾಶದಲ್ಲಿ ಅಂದರೆ, ಮನಸ್ಸಿನ ಹೊರಗೆ ಭಾಷೆಯ ಅಸ್ತಿತ್ವವೆ ಇಲ್ಲವೆನ್ನುವ ನಿರ್ಣಯಕ್ಕೆ ಜೋತುಬಿದ್ದಿರುವುದು ‘ಮನಸ್ಸು’ ಎನ್ನುವುದನ್ನು ‘ಅಮೂರ್ತ ದೆವ್ವ’ವೆಂದು ಗ್ರಹಿಸಿದಾಗ ಮಾತ್ರವೆ ಶುದ್ಧವಾದ, ಯಾವುದೆ ಆಧಾರವಿಲ್ಲದ, ಯಾವ ಬಗೆಯ ಕಲಬೆರಕೆಗೂ ಒಳಗಾಗದ ‘ಅರಿವ’ನ್ನು ಕಂಡುಕೊಳ್ಳಲು ಸಾಧ್ಯ.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.