MENU

ಒಳಗೂ ಬಯಲು ಹೊರಗೂ ಬಯಲು

ದಾದಾಗಿರಿಯ ದಿನಗಳು

June 23, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

‘ನೆನಪು’ ಎನ್ನುವ ಭೀಕರ ದೈತ್ಯ

‘ಮನಸ್ಸು’ ಎನ್ನುವುದೆ ನಮ್ಮನ್ನು ನಿಯಂತ್ರಿಸುವ, ಕಾಡುವ ಒಂದು ಬೃಹತ್ ಅಮೂರ್ತ ದೆವ್ವ ಎನ್ನುವುದನ್ನು ವಿವರಿಸಿದ ನಂತರ ಅದು ಉದ್ಭವಿಸುವ ರೀತಿಯನ್ನು ವಿವರಿಸುತ್ತಾಳೆ ಮಾಚಿಗ್.

‘The way in which the intangible demon manifests: In that discriminating thought of good and evil which arises in one’s own mind when phenomena appear in defined the intangible demon.

If one separates oneself from the natural and spontaneous state of the mind and clings to the idea of benevolent gods and evil spirits, because of the oscillation between hope and fear one’s own demon manifests in oneself.’

ಈ ಅಮೂರ್ತ ದೆವ್ವಗಳು ಹೇಗೆ ನಮ್ಮೊಳಗೆ ಉದ್ಭವಿಸಿ ನಮ್ಮ ಬದುಕುಗಳನ್ನು ನಿಯಂತ್ರಿಸತೊಡಗುತ್ತವೆ? ನಾವು ಎಲ್ಲ ಸನ್ನಿವೇಶಗಳಲ್ಲೂ ತಪ್ಪು-ಸರಿಯ ಗೊಂದಲಕ್ಕೆ ಸಿಲುಕಿರುತ್ತೇವೆ. ಪ್ರತೀ ಘಟನೆಯಲ್ಲೂ ಒಂದಲ್ಲಾ ಒಂದು ರೀತಿಯ ದ್ವಂದ್ವಗಳಿಗೆ ಈಡಾಗಿರುತ್ತೇವೆ. ಮುಂದೆ ಹೋಗುವುದೊ, ಬೇಡವೊ ಎನ್ನುವ ಸಂದಿಗ್ಧದಲ್ಲಿ ನರಳುತ್ತಿರುತ್ತೇವೆ. ಒಟ್ಟಾರೆಯಾಗಿ ನಲಿವು-ಸಂಕಟ-ಆತಂಕಗಳ ತೂಗುಯ್ಯಾಲೆಯಲ್ಲಿ ಅಪ್ರಜ್ಞಾಪೂರ್ವಕವಾಗಿ ಚಲಿಸುತ್ತಿರುತ್ತೇವೆ. ಅಂತಹ ದ್ವಂದ್ವಗಳು ನಮ್ಮೊಳಗೆ, ನಮ್ಮ ಅರಿವಿಗೇ ಬಾರದಂತೆ ಘನಾಕೃತಿಗಳನ್ನು ನಿರ್ಮಿಸತೊಡಗುತ್ತವೆ. ಅವು ಸ್ವಲ್ಪ ಕಾಲ ಇದ್ದು ಕರಗಿಹೋಗುವುದಿಲ್ಲ. ಜೀವನವಿಡೀ ನಮ್ಮನ್ನು ಕಾಡುತ್ತಿರುತ್ತವೆ. ಹೆಮ್ಮರವಾಗಿ ಬೆಳೆಯತೊಡಗುತ್ತವೆ. ಭರವಸೆ-ಭೀತಿಗಳ ಸೆರೆಮನೆಯಲ್ಲಿ ನಮ್ಮನ್ನು ಬಂಧಿಯನ್ನಾಗಿಸುತ್ತವೆ. ಭರವಸೆ ದೇವರ ಸಂಕೇತವಾದರೆ, ಭೀತಿ ದೆವ್ವದ ಸಂಕೇತ. ಆದರೆ ಇಲ್ಲಿ ದೇವರು-ದೆವ್ವಗಳು ಯಾವ ರೀತಿಯಲ್ಲಿ ಬೆರೆತಿರುತ್ತವೆಂದರೆ, ನಮ್ಮೊಳಗೆ ಅಮೂರ್ತ ದೆವ್ವಗಳಾಗಿ ಪರಿವರ್ತಿತವಾಗುತ್ತವೆ.
ಅಮೂರ್ತ ದೆವ್ವಗಳನ್ನು ಕುರಿತು ಮತ್ತಷ್ಟು ಹೇಳುತ್ತಾಳೆ ಮಾಚಿಗ್:

‘From the clear and immense space

of the essential dimension of reality,

thoughts and memories arise in all directions

just as ripples and waves arise

on the immatable ocean.

Whoever has this understanding

has no need of contrivances

and naturally remain in his own condition.

One liberates oneself in the space in which

neither benefit nor harm is born.

As wisdom arises spontaneously

from the space of essential reality,

it is not necessary to nurture jealousy,

aversion or affection.

If one feels no aversion or affection

the spontaneous mind becomes manifest.

ಅಗಾಧ ಬಯಲಿನ ಎಲ್ಲೆಡೆಯಿಂದ ನೆನಪು ಮತ್ತು ಆಲೋಚನೆಗಳು ನಮ್ಮನ್ನು ಕವಿಯುತ್ತವೆನ್ನುತ್ತಾಳೆ ಮಾಚಿಗ್. ನೆನಪಿನ ಬಗ್ಗೆ ನೀವೆಂದಾದರೂ ಗಂಭೀರವಾಗಿ ಯೋಚಿಸಿದ್ದೀರಾ? ನಾವೆಂದರೆ ಬೇರೇನೂ ಅಲ್ಲ: ನೆನಪುಗಳ ಉಗ್ರಾಣ. ಬಯಲಿನಷ್ಟೆ ವಿಶಾಲವಾದ ಉಗ್ರಾಣ. ಎಲ್ಲ ದಿಕ್ಕುಗಳನ್ನೂ ವ್ಯಾಪಿಸಿರುವ ಉಗ್ರಾಣ. ಆ ಉಗ್ರಾಣದಲ್ಲಿ ನಾವು ಗ್ರಹಿಸಬಹುದಾದ ಎಲ್ಲ ಬಗೆಯ ರಾಗ-ದ್ವೇಷ-ಭಾವನೆಗಳು ಅಡಕಗೊಂಡಿವೆ. ಅವು ನಮ್ಮನ್ನು ಕಿತ್ತು ತಿನ್ನುತ್ತಿರುತ್ತವೆ. ಅವುಗಳಿಂದ ಕಳಚಿಕೊಳ್ಳುವುದು ತೀರ ಪ್ರಯಾಸದ ಸಂಗತಿ. ನಿಮಗೆ ಯಾರೊಡನಾದರೂ love-hate ಸಂಬಂಧವಿದ್ದರೆ ಅದರಿಂದ ಮನಸ್ಸನ್ನು ಹಗುರವಾಗಿಸಿಕೊಳ್ಳಲು ಯತ್ನಿಸಿ ನೋಡಿದಾಗ ಅದರ ತೀವ್ರ ಸ್ವರೂಪ ಗೋಚರವಾಗುತ್ತದೆ. ನಮಗೆ ಸಿಟ್ಟಿರುವ ಸಂಗಾತಿಯ ಬಗ್ಗೆ ಯೋಚಿಸುವುದು ನಮಗೆ ಯಾತನೆಯನ್ನುಂಟು ಮಾಡುತ್ತದೆ, ಯೋಚಿಸದಿರುವುದು ಇನ್ನೂ ಹೆಚ್ಚಿನ ಯಾತನೆ! ಅಂತಹ ಅಸಂಖ್ಯಾತ ಸಂಗತಿಗಳು ನಮ್ಮಲ್ಲಿ ಬೃಹತ್ ಕಟ್ಟಡಗಳಂತೆ ನೆಲೆಯೂರಿಬಿಟ್ಟಿರುತ್ತವೆ.
ನನ್ನದೆ ಬದುಕಿನ ಒಂದು ಸಂಗತಿಯನ್ನು ನಿಮ್ಮೊಡನೆ ಈ ಸಂದರ್ಭದಲ್ಲಿ ಹಂಚಿಕೊಳ್ಳಬೇಕೆನ್ನಿಸಿದೆ.
ನನಗಾಗ ಎಂಟು ವರ್ಷ. ರಾಮನಗರದಲ್ಲಿದ್ದೆವು. ಆಗ ನಮ್ಮಪ್ಪ ಮಿಡ್ಲ್‍ಸ್ಕೂಲ್ ಮಾಸ್ಟರ್. (ನಂತರದಲ್ಲಿ ಪ್ರೈಮರಿ ಸ್ಕೂಲ್‍ಗೆ!) ಆಗ ವಯಸ್ಸಿನ ಮಿತಿಯಿರದಿದ್ದ ಕಾರಣದಿಂದಾಗಿ ನಾನಾಗಲೆ 5ನೇ ಕ್ಲಾಸಿನಲ್ಲಿದ್ದೆ. ಬಹುತೇಕ ಎಲ್ಲರೂ ನನಗಿಂತಲೂ ದಾಂಡಿಗರಿದ್ದರು. ಏಳನೆ ತರಗತಿಯವರಂತೂ ನನ್ನ ಕಣ್ಣಿಗೆ ಅಕ್ಷರಶಃ ದೈತ್ಯರಂತೆ ಕಾಣುತ್ತಿದ್ದರು. ನನ್ನ ಅಪ್ಪ ವಿದ್ಯಾರ್ಥಿಗಳಿಗೆ ಪ್ರೀತಿ, ಕಾಳಜಿಯಿಂದ ಪಾಠ ಹೇಳಿಕೊಡುತ್ತಿದ್ದರೂ, ಕೆಟ್ಟ ಹವ್ಯಾಸಗಳನ್ನು ಕಟುವಾಗಿ ದಂಡಿಸುತ್ತಿದ್ದರು. ಅವರಿಂದ ಕೋಲಿನಲ್ಲಿ ಹೊಡೆತ ತಿಂದವರು ನನ್ನನ್ನು ಕೆಂಗಣ್ಣುಗಳಿಂದ ದುರುಗುಟ್ಟಿ ನೋಡುತ್ತಿದ್ದರು. ಒಂದು ದಿನ ನಾನು ಊರಿನ ಬದಿಯಲ್ಲಿರುವ ಐಜೂರಿಗೆ ನನ್ನ ತಮ್ಮ ಮತ್ತು ಇನ್ನಿಬ್ಬರು ಸಹಪಾಠಿಗಳೊಡನೆ ಹೋಗಿದ್ದಾಗ ದಾಂಡಿಗನೊಬ್ಬ ಇದಿರಾದ. ಅವನಿಗೆ ನನ್ನ ಸಹಪಾಠಿಗಳಲ್ಲಿ ಒಬ್ಬನ ಪರಿಚಯವಿತ್ತು. ‘ಏನ್ರೊ ಈ ಕಡೆ..?’ ಎಂದು ಆ ದಾಂಡಿಗ ಕೇಳಿದ. ‘ನಮ್ಮ ಮೇಷ್ಟ್ರು ತಮ್ಮೇಗೌಡರ ಮಕ್ಕಳಿಗೆ ಐಜೂರು ತೋರ್ಸೋಕೆ ಕರ್ಕೊಂಬಂದಿದ್ದೀವಿ…’ ಎಂದ. ‘ಓಹೋ…’ ಎಂದ ಅವನು, ‘…ನಿಮ್ಮಪ್ಪ ನಮ್ಗೆ ಹೊಡ್ದಂತೆ ನಿಮ್ಗೂ ಹೊಡೀತಾನೊ..?’ ಎಂದು ನನ್ನನ್ನು ಪ್ರಶ್ನಿಸಿದ. ಸಾಮಾನ್ಯವಾಗಿ ವಿದ್ಯಾರ್ಥಿಗಳು ನನ್ನ ಅಪ್ಪನನ್ನು ಬಹುವಚನದಿಂದ ಸಂಬೋಧಿಸುವುದಕ್ಕೆ ಹೊಂದಿಕೊಂಡಿದ್ದ ನನಗೆ ಆ ದಾಂಡಿಗ ನನ್ನಪ್ಪನ ಬಗ್ಗೆ ಏಕವಚನ ಬಳಸಿದ್ದು ತಕ್ಷಣವೆ ಸಂಕಟವನ್ನುಂಟುಮಾಡಿತು. ಆದರೂ ಅದನ್ನು ತೋರಿಸಿಕೊಳ್ಳದೆ, ‘…ತಪ್ಪು ಮಾಡಿದಾಗ ನಮ್ಗೂ ಹೊಡೀತಾರೆ…’ ಎಂದೆ. ಅವರು ತಮ್ಮ ಮಕ್ಕಳಿಗೂ ಹೊಡೆಯುತ್ತಾರೆ ಎನ್ನುವುದನ್ನು ಕೇಳಿ ಆ ದಾಂಡಿಗನಿಗೆ ಸ್ವಲ್ಪ ಸಮಾಧಾನವಾಗಬಹುದೆಂದು ಯೋಚಿಸುವಷ್ಟು ಪ್ರಬುದ್ಧತೆ ನನ್ನಲ್ಲಿ ಆಗಲೆ ಬೆಳೆದಿತ್ತು. ಆತ ನನ್ನ ಮಾತನ್ನು ಕೇಳಿ, ಏನೊ ಗಹನವಾದುದನ್ನು ಯೋಚಿಸುವಂತೆ ಆಕಾಶದ ಕಡೆ ನೋಡುತ್ತಾ, ‘…ತಮ್ಮೇಗೌಡನ ಹೆಂಡ್ತೀನ ಕೆಯ್ಯಾ…’ ಎಂದುಬಿಟ್ಟ. ನನಗೆ ನಿಂತಲ್ಲೆ ನೆಲ ಕಂಪಿಸಿದ ಹಾಗೆನ್ನಿಸಿಬಿಟ್ಟಿತು. ನನಗಿಂತಲೂ ಸಣ್ಣವನಿದ್ದ ನನ್ನ ತಮ್ಮನ ಮುಖ ರಕ್ತಚಲನೆಯೆ ಬತ್ತಿಹೋಯಿತೇನೊ ಎನ್ನುವಷ್ಟು ಸಣ್ಣದಾಗಿಬಿಟ್ಟಿತು. ನನ್ನೊಡನಿದ್ದ ಸಹಪಾಠಿಗಳು ಬೆದರಿಹೋದರು. ನಾವು ಏನೂ ಪ್ರತಿಕ್ರಿಯಿಸದೆ ಇರುವುದನ್ನು ನೋಡಿದ ಆತ, ನನ್ನ ಕಾಲರ್ ಜಗ್ಗಿ, ‘…ಹೇಳಿದ್ದು ಕೇಳಿಸ್ತೇನೊ..? ನಿನ್ ತಾಯ್ನ ಕೆಯ್ಯಾ ಅಂತ ನಾನೇಳಿದ್ದು…’ ಎಂದ. ಆತನಿಗೆ ಪರಿಚಯವಿದ್ದ ಸಹಪಾಠಿ, ‘…ನಡೀರಪ್ಪ ಹೋಗೋಣ…’ ಎಂದು ನಮ್ಮನ್ನು ಕರೆದುಕೊಂಡು ಹೆಜ್ಜೆ ಹಾಕತೊಡಗಿದ. ಆ ದಾಂಢಿಗ ‘…ಲೋ ಕಡ್ಡಿ ನನ್‍ಮಗನೆ… ಹೋಗಿ ನಾನು ಬೈದೆ ಅಂತ ನಿಮ್ಮಪ್ಪಂಗೆ ಏಳು…’ ಎಂದು ದಾಪುಗಾಲು ಹಾಕುತ್ತಾ ಹೋದ. ನಗುನಗುತ್ತಾ ಅಲ್ಲಿಗೆ ಹೋಗಿದ್ದ ನಾವು ಸಪ್ಪೆ ಮುಖದಿಂದ ಹಿಂದಿರುಗಿದೆವು. ಆದರೆ ನಾನು ಆ ದಾಂಡಿಗ ಬೈದಿದ್ದನ್ನು ನನ್ನ ಅಪ್ಪನಿಗೆ ಹೇಳಲಿಲ್ಲ. ಅದನ್ನು ಹೇಳಿಕೊಳ್ಳಲೂ ಸಾಧ್ಯವಾಗದಷ್ಟು ನನ್ನೊಳಗೆ ವಿಚಿತ್ರ ಅಂಜಿಕೆ ಮಡುಗಟ್ಟಿತ್ತು. ನಂತರದಲ್ಲಿ ನನಗೆ ತಿಳಿದುಬಂದಿದ್ದು ಆ ದಾಂಡಿಗ ಎರಡು ವರ್ಷಗಳ ಹಿಂದೆ ನನ್ನ ಅಪ್ಪನ ವಿದ್ಯಾರ್ಥಿಯಾಗಿದ್ದನೆಂದು.
ಮತ್ತೆಂದೂ ಆ ದಾಂಡಿಗ ನನ್ನ ಕಣ್ಣಿಗೆ ಬೀಳಲೆ ಇಲ್ಲ. ಆದರೆ ಈ ಕ್ಷಣದವರೆಗೂ ಆ ಘಟನೆ ನನ್ನೊಳಗಿನಿಂದ ಮರೆಯಾಗಿಲ್ಲ. ತೀರ ರಾತ್ರಿಯಲ್ಲಿ ಇದ್ದಕ್ಕಿದ್ದ ಹಾಗೆ ನನ್ನೊಳಗಿನಿಂದ ಒತ್ತರಿಸಿ ಬಂದು ಒಂದೆರಡು ಕ್ಷಣ ನನ್ನನ್ನು ಕಂಗೆಡಿಸುತ್ತದೆ. ಸಂಪೂರ್ಣ ಎಚ್ಚರವಾದಾಗ ನಕ್ಕು ಸುಮ್ಮನಾಗುತ್ತೇನೆ. ಅದು ತಮಾಷೆಯ ಸಂಗತಿಯಂತೆ ಕಾಣುತ್ತದೆ. ಆದರೂ ಆ ಘಟನೆ ನನ್ನನ್ನು ಆಗಾಗ ಸುತ್ತಿಕೊಂಡು ಹೈರಾಣಗೊಳಿಸುವುದಂತೂ ಸತ್ಯ.
ಆ ರೀತಿ ನಮ್ಮೊಳಗೆ ಹುದುಗಿರುವ ಅಸಂಖ್ಯಾತ ಬಗೆಯ hidden shameಗಳಿರುತ್ತವೆ. ಅವು ಸಿಟ್ಟಾಗಿ ವ್ಯಕ್ತವಾಗಿಬಿಟ್ಟರೆ ಯಾವ ಸಮಸ್ಯೆಯೂ ಇರುವುದಿಲ್ಲ. ಆದರೆ ಆ ರೀತಿ ವ್ಯಕ್ತವಾಗದಿದ್ದಾಗ ನಮ್ಮೊಳಗೆ ರಾಕ್ಷಸಾಕಾರವಾಗಿ ಬೆಳೆಯುತ್ತಾ ಹೋಗುತ್ತವೆ. unaddressed anger ನಮ್ಮ ಒಳಗನ್ನು ಹುಳುಗುಳಂತೆ ತಿನ್ನುತ್ತಾ ಹೋಗುತ್ತದೆ. ಅಂತಹ ನೆನಪುಗಳು ಮತ್ತು ಅವುಗಳಿಂದಾಗಿ ಅಸ್ತಿತ್ವಕ್ಕೆ ಬರುವ ಆಲೋಚನೆಗಳಿಂದ ಕಳಚಿಕೊಂಡಾಗ ಮಾತ್ರ ಅಮೂರ್ತ ದೆವ್ವಗಳ ಹಿಡಿತದಿಂದ ಪಾರಾಗಲು ಸಾಧ್ಯವೆನ್ನುತ್ತಾಳೆ ಮಾಚಿಗ್. ಆದರೆ ಅದು ಕೇವಲ ಮನಸ್ಸಿನಿಂದ ಸಾಧ್ಯವಾಗುವುದಿಲ್ಲ. ಗಂಭೀರ ಸಾಧನೆ, ತಪಗಳಿಂದ ಮಾತ್ರ ಸಾಧ್ಯ. ಹಾಗೆಯೆ ನಮ್ಮೊಳಗೆ ವಿನಾಕಾರಣ ಉಂಟಾಗುವ ದ್ವೇಷ, ಅಸೂಯೆ ಮತ್ತು ಮೋಹಗಳಿಂದಲೂ ಹೊರಬರಲು ಆಗ್ರಹಿಸುತ್ತಾಳೆ ಮಾಚಿಗ್, ನಮ್ಮ ವಚನಕಾರರಂತೆ.
ನಂತರ ನಮ್ಮಲ್ಲಿ ತಲೆದೋರುವ ‘ತೃಪ್ತದೆವ್ವ’ಗಳನ್ನು ಕುರಿತು ಹೇಳುತ್ತಾಳೆ:

‘The way in which the demons of complacency arise:

The ordinary demons and the superior ones

arise from illusory mind.

If practicing in horrifying places,

one is not disturbed by the evil spirits

self satisfaction is born in oneself;

this is the demon of complacency.

When the signs of spiritual power appear-

merits and material weath-

the demons of distraction arise.

Glory, fame, happiness, friends and enemies

are the demons of complacency.

When gods and spirits confer their magical power,

and one surrounded by sons and faithful friends

getting pleasure and satisfaction,

the demons of complacency arise.’

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.