MENU

ದಾದಾಗಿರಿಯ ದಿನಗಳು

ಒಳಗೂ ಬಯಲು ಹೊರಗೂ ಬಯಲು

June 23, 2018 ಪ್ರಚಲಿತ, ಬೆಂಗಳೂರು, ಯುವಜನ, ರಾಜಕೀಯ, ರಾಜ್ಯ, ರಾಷ್ಟ್ರೀಯ

ಕಮಲಾಂಗಿಗಳ ಕಿತ್ತಾಟ – 2

ಮೊನ್ನೆ ಮೊನ್ನೆಯಷ್ಟೆ ಬಿಜೆಪಿಯ ಅಶೋಕ್-ಅನಂತ ಕುಮಾರ್ ಕಿತ್ತಾಟವನ್ನು ಜನ ನೋಡಿದ್ದರು. ಇದೀಗ once again ಮಾಮೂಲಿ ಜಗಳಗಂಟರಾದ ಯಡಿಯೂರಪ್ಪ ಮತ್ತು ಈಶ್ವರಪ್ಪರ ಕಚ್ಚಾಟ ಬೀದಿಗೆ ಬಿದ್ದಿದೆ. ಇದಕ್ಕೆ ಮುನ್ನುಡಿಯಂತೆ ಜೂನ್ 25ರಂದು ಬಾಗಲಕೋಟೆಯಲ್ಲಿ ಈಶ್ವರಪ್ಪ “ಬ್ರಿಗೇಡ್”ಗೆ ವೇದಿಕೆ ಸಜ್ಜಾಗಿದೆ.

ಆ ಮೂಲಕ ಲೋಕಸಭಾ ಚುನಾವಣೆಯ ನಾಯಕತ್ವವನ್ನು ಯಡಿಯೂರಪ್ಪರಿಂದ ಕಸಿದುಕೊಳ್ಳಲು ಈಶ್ವರಪ್ಪ ತಂತ್ರ ಹೆಣೆಯುತ್ತಿದ್ದಾರೆ. ಅಸಲಿಗೆ ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲೇ ಈ ಬೆಂಕಿ ಹೊತ್ತಿಕೊಳ್ಳಬೇಕಿತ್ತು. ಆದರೆ ಬಿಜೆಪಿಯ ರಾಷ್ಟ್ರೀಯ ನಾಯಕ ಅಮಿತ್ ಶಾ ಈ ಯಡಿಯೂರಪ್ಪ ಮತ್ತು ಈಶ್ವರಪ್ಪರಿಗೆ ಕೈ ಕಟ್ಟಿ ಬಾಯಿ ಮುಚ್ಚಿ ಕುಳಿತುಕೊಳ್ಳುವಂತೆ ಸೂಚಿಸಿದ್ದರು. ವಿಧಾನಸಭೆ ಚುನಾವಣೆಯ ಬಗ್ಗೆ ಮಾತ್ರ ಗಮನ ಹರಿಸುವಂತೆ ಶಾ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

ಆಗ ತೆಪ್ಪಗಾಗಿದ್ದ ಈಶ್ವರಪ್ಪ ಮತ್ತೊಮ್ಮೆ ದಿಗ್ಗನೆದ್ದು ಕುಳಿತಿದ್ದಾರೆ. ಬಾಗಲಕೋಟೆಯಲ್ಲಿ ಯಾವುದೋ ಒಂದು ಮದುವೆಗೆ ಮಾತ್ರ ಹೋಗುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ನ ಪ್ರತಿಯೊಬ್ಬರನ್ನೂ ಅಲ್ಲಿಗೆ ಕರೆಸಿಕೊಳ್ಳುತ್ತಿದ್ದಾರಂತೆ. ನಂತರದ ಬೆಳವಣಿಗೆಗಳು ಏನಾಗಬಹುದೆಂಬ ಕುತೂಹಲ ಕಮಲಾಂಗಿಗಳಲ್ಲಿ ಹುಟ್ಟಿಕೊಂಡಿದೆ. ಈ ಹಿಂದೆಯೂ ಇಂಥದ್ದೇ ರಹಸ್ಯ ಸಭೆಯನ್ನು ತುಮಕೂರಿನಲ್ಲಿ ಮಾಡಿದ್ದರು ಈಶ್ವರಪ್ಪ. ಈ ಬಾರಿ ಬಾಗಲಕೋಟೆಯಲ್ಲಿ “ಬ್ರಿಗೇಡ್” ಬೆಂಬಲಿಗರ “ಅಂಡರ್ ಗ್ರೌಂಡ್ ಮೀಟಿಂಗ್” ನಡೆಯಲಿದೆಯಂತೆ.

ಈ ಬಾರಿಯೂ ಪ್ರತಿ ಬಾರಿಯಂತೆ ಈ ಜಗಳಗಂಟರ ಮುನಿಸು ತಣ್ಣಗಾಗುತ್ತಾ…? ಅಥವಾ ಭುಗಿಲೇಳುತ್ತಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

 

Tags: , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.