MENU

ಕಮಲಾಂಗಿಗಳ ಕಿತ್ತಾಟ – 2

ದಾದಾಗಿರಿಯ ದಿನಗಳು

June 24, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಧ್ಯಾನಿ-ಧ್ಯಾನ – 1

ಸಾಮಾನ್ಯ ದೆವ್ವಗಳೆ ಇರಲಿ ಅಥವಾ ವಿಶಿಷ್ಟ ದೆವ್ವಗಳೆ ಇರಲಿ-ಎರಡೂ ಉದ್ಭವಿಸುವುದು ನಮ್ಮ ಭ್ರಮಾತ್ಮಕ ಮನಸ್ಸಿನಿಂದ. ಮನಸ್ಸು ಎನ್ನುವುದನ್ನು ನಾವು ಎಷ್ಟೇ ಮನಸ್ಸಿಟ್ಟು, ಯಾವುದೆ ದುರ್ಬೀನನ್ನಿಟ್ಟು ನಮ್ಮೊಳಗೆ ಹುಡುಕಿದರೂ ಅದರ ಅಸ್ತಿತ್ವ ಗೋಚರಿಸುವುದಿಲ್ಲ. ಮಿದುಳು ಮನಸ್ಸಿನ ಮೂರ್ತ ಅಂಗವೆಂದು ನಾವು ಭಾವಿಸಿದ್ದೇವೆ. ಆದರೆ ಮಿದುಳು ಇತರ ಅಂಗಗಳ ನೆರವಿಲ್ಲದೆ ಕಾರ್ಯನಿರ್ವಹಿಸಲು, ಜೀವಂತವಾಗಿರಲು ಸಾಧ್ಯವೆ? ನಮ್ಮ ದೇಹದ circuit ಅನ್ನು ನಿಯಂತ್ರಿಸುವ ಮಿದುಳು ನಮ್ಮ ದೇಹಕ್ಕೆ ಎಳ್ಳಷ್ಟೂ ಸಂಬಂಧಿಸಿರದ ಬಾಹ್ಯ ಜಗತ್ತನ್ನು ಕುರಿತು ಏಕೆ ತಲೆ ಕೆಡಿಸಿಕೊಳ್ಳಬೇಕು?! ಅಂದರೆ, ಮನಸ್ಸು ಮಿದುಳಿನ ವ್ಯಾಪ್ತಿಯನ್ನು ಮಾಡಿದ್ದು. ಭ್ರಮೆ, ಕಲ್ಪನೆಗಳ ಕೊಡುಗೆ ಅದು. ಅವುಗಳ ಮಿಶ್ರಣ. ಆ ಮಿಶ್ರಣ ನಮ್ಮಲ್ಲಿ ದೆವ್ವ-ದೇವರುಗಳನ್ನು ಸೃಷ್ಟಿಸುವ ಸಾಮಥ್ರ್ಯವನ್ನು ಹೊಂದಿದೆ. ಬಾಹ್ಯ ಜಗತ್ತಿನ ನಮ್ಮ ವರ್ತನೆಗಳು, ಕ್ರಿಯೆಗಳು ಭ್ರಮಾತ್ಮಕ ಮನಸ್ಸಿನ ಮೇಲೆ ಪರಿಣಾಮ ಬೀರಿ ನಮ್ಮೊಳಗೆ ಅಂತಹ ವಿಕಾರಗಳನ್ನು ಸೃಷ್ಟಿಸುತ್ತವೆ.
ನಿದರ್ಶನಕ್ಕೆ ಸಾಧಕನೊಬ್ಬ ಸಾಮಾನ್ಯರು ಭೀತಿ ಪಡುವಂತಹ ಸ್ಥಳಗಳಲ್ಲಿ ಕುಳಿತು ಸಾಧನೆಯನ್ನು ಎಸಗಿದಾಗ, ಅವನಿಗೆ ಅಂತಹ ಸ್ಥಳಗಳಲ್ಲಿಯೂ ಯಾವುದೆ ಬಗೆಯ ತೊಂದರೆಗಳಾಗದೆ ಇದ್ದಾಗ, ಅವನಲ್ಲಿ ಒಂದು ಬಗೆಯ ಸಂತುಷ್ಟತೆ ಉಂಟಾಗುತ್ತದೆ. ತಾನು ಏನನ್ನು ಬೇಕಾದರೂ ಎದುರಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಅದು ಅವನೊಳಗೆ ಸಂತೃಪ್ತಿಯ ದೆವ್ವವಾಗಿ ರೂಪುಗೊಳ್ಳತೊಡಗುತ್ತದೆ. ಅವನ ಆಲೋಚನೆಗಳನ್ನು ನಿಯಂತ್ರಿಸತೊಡಗುತ್ತದೆ.
ಮಾಚಿಗ್ ಹೇಳುತ್ತಿರುವುದು ಅವಳ ಕಾಲದಲ್ಲಿ ಮಾಂತ್ರಿಕರು ತಮ್ಮ ಸಾಧನೆಗೆ ಬಳಸುತ್ತಿದ್ದ ಸ್ಥಳಗಳನ್ನು ಕುರಿತು. ಅವಳ ಕಾಲದಲ್ಲಿ ಜನರಿಗೆ ಹೆಚ್ಚು ಉದ್ಯೋಗದ ಆಯ್ಕೆಗಳಿರಲಿಲ್ಲ. ಯೋಧ ಅಥವಾ ರೈತ, ಗುಮಾಸ್ತ ಅಥವಾ ಮಾಂತ್ರಿಕ-ಅವುಗಳ ಪರಿಧಿಯಲ್ಲೆ ಎಲ್ಲವೂ ಸಾಗುತ್ತಿತ್ತು. ಮಾಂತ್ರಿಕರು ಸಾಮಾನ್ಯವಾಗಿ ತಮ್ಮ ಸಾಧನೆಗೆ ಆರಿಸಿಕೊಳ್ಳುತ್ತಿದ್ದ ಸ್ಥಳಗಳೆಂದರೆ ಸ್ಮಶಾನ, ನದಿಯ ತಟ, ಬೆಟ್ಟದ ತುದಿ. ಜನ ವಿರಳವಾದ ಏಕಾಂತ ಜಾಗಗಳು. ಅಂತಹ ಜಾಗಗಳಲ್ಲಿ ಕ್ಷುದ್ರಜೀವಿಗಳು ನೆಲೆಸಿರುತ್ತವೆನ್ನುವ ನಂಬಿಕೆ ಅಂದಿನ ಕಾಲದಲ್ಲಿತ್ತು. ಅಂತಹ ನಂಬಿಕೆಯನ್ನು ಎದೆಯಲ್ಲಿಟ್ಟುಕೊಂಡು ಅಂತಹ ಸ್ಥಳಗಳಲ್ಲಿ ಸಾಧನೆಗೆ ಕೂರುವ ಸಾಧಕ ಅವನಿಗೆ ಯಾವ ರೀತಿಯ ತೊಂದರೆಯೂ ಆ ‘ಜೀವಿ‘ಗಳಿಂದ ಉಂಟಾಗದಿದ್ದಾಗ ತಾನು ಸಾಮಾನ್ಯರಿಗಿಂತ ಅತೀತನೆನ್ನುವ ಭ್ರಮೆ ಉಂಟಾಗುತ್ತದೆ. ಅದು ಸಾಮಾನ್ಯವಾದ ಭ್ರಮೆಯಲ್ಲ. ಆ ಭ್ರಮೆ ಅವನೊಳಗೆ ದೆವ್ವವಾಗಿ ಎಡೆಬಿಡದೆ ದಿಕ್ಕು ತಪ್ಪಿಸುತ್ತಿರುತ್ತದೆ. ಮತ್ತು ಅಧ್ಯಾತ್ಮಿಕ ಸಾಧಕನ ಗುರಿ ಮತ್ತು ಉದ್ದೇಶಗಳು ಅಲೌಕಿಕವಾಗಿಯೆ ಇರಬೇಕೆನ್ನುವ ನಿಯಮವಿಲ್ಲದಿರುವುದರಿಂದ, ಅಂತಹ ಸಾಧಕ ಜನಮನ್ನಣೆ ಮತ್ತು ಸಂಪತ್ತನ್ನು ಗಳಿಸತೊಡಗಿದಾಗ, ತನ್ನೊಳಗಿನ ದಿಕ್ಕುಗೆಡಿಸುವ ದೆವ್ವಕ್ಕೆ ಗುಲಾಮನಾಗುತ್ತಾನೆ.
ಸಾಮಾಜಿಕ ಪ್ರತಿಷ್ಠೆ, ಮನ್ನಣೆ, ಆನಂದ, ಆಪ್ತರು ಮತ್ತು ಶತ್ರುಗಳೆಲ್ಲವೂ ಅಂತಹ ದೆವ್ವಗಳೆ. ಸಂತೃಪ್ತ ದೆವ್ವಗಳು. ಕಾಣದ ದೇವರುಗಳು ಮತ್ತು ಏಂಜೆಲ್‍ಗಳು ತಮ್ಮ ಮಾಂತ್ರಿಕ ಸಾಮಥ್ರ್ಯದಿಂದ ಸಂತುಷ್ಟಗೊಳಿಸುವ ಸಂಸಾರ ಸುಖವನ್ನು ಜನಗಳಿಗೆ ನೀಡಿದಾಗ ಸಂತೃಪ್ತಿಯ ದೆವ್ವಗಳು ತಲೆದೋರತೊಡಗುತ್ತವೆ.


ಹಾಗೆಂದು ಆ ದೆವ್ವಕ್ಕೆ ನಾವು ಈಡಾಗಲೇಬೇಕೆ? ಅದರ ಹಿಡಿತಕ್ಕೆ ಸಿಗದೆ ಇರಲು ಸಾಧ್ಯವಿಲ್ಲವೆ? ಸಾಧ್ಯವೆನ್ನುತ್ತಾಳೆ ಮಾಚಿಗ್.
ಅದನ್ನು ಮನಸ್ಸಿಗೆ ತಾಗುವಂತೆ ವಿವರಿಸುತ್ತಾಳೆ:

Whichever virtue one achieves

with mind empty of dualism

between subject and object,

do not grasp at it

as if it were concrete.

Act naturally without any attachment

to the nature of virtues,

considering them as the object of dreams.

Like a beautiful woman

with ornaments who makes herself

even more beautiful,

anything that arises

is as an ornament

of one’s own condition

There is no reason for vanity

but if it arises one’s contaminated

by the various categories of illusion.

May this noble conduct

of remaining in one’s own natural state

without attachment to phenomena

be kept in secret in the very heart

of those who know!

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.