MENU

ದಾದಾಗಿರಿಯ ದಿನಗಳು

ಗ್ರಾಮೀಣ ಪ್ರತಿಭೆಗೊಲಿದ ಕಿಲಾಡಿ ಕಿರೀಟ…!

June 25, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಧ್ಯಾನಿ-ಧ್ಯಾನ – 2

ಕೆ ನಮ್ಮ ವಚನಕಾರರ ರೀತಿಯೆ ಹೇಳಿಕೊಡುತ್ತಾಳೆ: ಯಾವ ಕಾರಣಕ್ಕೂ ನಿನ್ನ ಅಹಂನಲ್ಲಿ ನೀನು ಕಳೆದುಹೋಗಬೇಡ; ಮಾಡುವ ಕೆಲಸಗಳಲ್ಲಿ ನಿರ್ಲಿಪ್ತತೆ ಇರಲಿ; ಯಾವುದೆ ಮೋಹವನ್ನಿಟ್ಟುಕೊಳ್ಳದೆ ಸಹಜವಾಗಿ ವರ್ತಿಸು. ಸುಂದರವಾದ ಹೆಣ್ಣು ತನ್ನ ಆಭರಣಗಳಿಂದ ತನ್ನನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವಂತೆ, ನಿನ್ನ ಸಾಧನೆಯೇನಿದ್ದರೂ ನೀನಿರುವ ಸ್ಥಿತಿಯ ಆಭರಣ. ಅಹಂಕಾರಕ್ಕೆ ಎಡೆ ನೀಡಬೇಡ. ನೀಡಿದರೆ ಎಲ್ಲವೂ ಕಲುಷಿತಗೊಳ್ಳುತ್ತದೆ. ಯಾವುದಕ್ಕೂ ಅಂಟಿಕೊಳ್ಳದೆ, ಪರಿಸ್ಥಿತಿಗೆ ಅನುಗುಣವಾಗಿ ಸಹಜವಾಗಿ ವರ್ತಿಸುವ ವಿದ್ಯೆಯನ್ನು ಎದೆಯಲ್ಲಿ ಗೋಪ್ಯವಾಗಿಟ್ಟುಕೊಂಡಿರಬೇಕು.
ನಂತರ ಅಸಾಮಾನ್ಯವಾದ ರೀತಿಯಲ್ಲಿ ಧ್ಯಾನ ಕುರಿತು ನಮ್ಮ ಅರಿವನ್ನು ಹಿಗ್ಗಿಸುತ್ತಾಳೆ ಮಾಚಿಗ್:

Because all things are the spontaneous mind,

he who meditates has nothing to meditate.

Let the perception which manifests spontaneously

be left in its natural condition

of union, clarity and splendor.

Because the meaning is immutable

it is unified,

because one gets real understanding

it is clear,

became one in liberated in one’s own condition

it is resplendent.

Thus just in butter freely remain in butter,

this contemplation without meditation

is the supreme meditation.

ಧ್ಯಾನ ಕುರಿತು ಎಷ್ಟು ಸೊಗಸಾಗಿ ಹೇಳುತ್ತಾಳೆ ನೋಡಿ ಈ ಮಾಚಿಗ್! ಧ್ಯಾನಿಗೆ ಧ್ಯಾನಿಸಲು ಏನೂ ಇಲ್ಲ! ಧ್ಯಾನಿಗೆ ಧ್ಯಾನ ಅಗತ್ಯವಿಲ್ಲ! ಅರಿವು ಅರಿವನ್ನು ಕುರಿತು ಅರಿವನ್ನು ಬೆಳೆಸಿಕೊಳ್ಳುವ ಅಗತ್ಯವಿದೆಯೆ?! ಧ್ಯಾನಿಯಾಗಿರುವವನ ಅಸ್ತಿತ್ವದಲ್ಲೆ ಧ್ಯಾನ ಅಡಕವಾಗಿಬಿಟ್ಟಿರುತ್ತದೆ. ಅವನಿಗೆ ಯಾವುದೆ ಗೊಂದಲವಿಲ್ಲ. ಆತನನ್ನು ಯಾವ ದೆವ್ವವೂ ಬಾಧಿಸಲಾರದು. ಅವನ ಗ್ರಹಿಕೆಯಲ್ಲಿ ದ್ವಂದ್ವಗಳಿಲ್ಲ. ಎಲ್ಲವೂ ಸ್ಪಷ್ಟ. ತಾನು ಮಾಡುವ ಎಲ್ಲದರ ಅರ್ಥದ ಅರಿವಿರುವುದರಿಂದ ಧ್ಯಾನ-ಧ್ಯಾನಿ ಒಂದಾಗಿರುತ್ತವೆ. ತನ್ನ ನೆಲೆಯಲ್ಲಿಯೆ ತಾನು ಬಿಡುಗಡೆ ಹೊಂದಿರುವುದರಿಂದ, ಯಾವುದೆ ಅನಿಶ್ಚಿತತೆಗಳಿಲ್ಲ. ಯಾವುದೆ ವಿಕಾರಗಳಿಲ್ಲ. ಎಲ್ಲ ಬಗೆಯ ಕಾಡುವಿಕೆಗಳಿಂದ ಮುಕ್ತ. ಬೆಣ್ಣೆ ಬೆಣ್ಣೆಯಲ್ಲೆ ಲೀನವಾಗಿರುವಂತೆ ಅರಿವು ಅರಿವಿನಲ್ಲೆ ಲೀನವಾಗಿ ಯಾವ ಬಗೆಯ ಧ್ಯಾನದ ಅಗತ್ಯವೂ ಕಂಡುಬರುವುದಿಲ್ಲ. ಅಂತಹ ಸ್ಥಿತಿಯನ್ನು ತಲುಪಿದಾಗ ಸಂತೃಪ್ತ ದೆವ್ವಗಳಾಗಲಿ ಅಥವಾ ಇತರ ದೆವ್ವಗಳಾಗಲಿ ಹತ್ತಿರಕ್ಕೂ ಸುಳಿಯುವುದಿಲ್ಲ. ಆದರೆ ಧ್ಯಾನಿಯಾದ ನಂತರ ಮಾತ್ರ ಆ ಸ್ಥಿತಿಯನ್ನು ತಲುಪಲು ಸಾಧ್ಯ. ‘… he who meditates has nothing to meditate…’ ಇದೊಂದು ರೀತಿಯಲ್ಲಿ ನಾನು ಹಿಂದೆ ಪ್ರಸ್ತಾಪಿಸಿರುವ master of intentನಂತೆ. ಬಯಕೆಯನ್ನೆ ವಶಪಡಿಸಿಕೊಂಡವನಿಗೆ, ಅದರ ಮಾಲೀಕನಾದವನಿಗೆ, ಯಾವ ಬಯಕೆಗಳಿರುತ್ತವೆ?
ನಂತರ ಮಾಚಿಗ್ ಬುದ್ಧಾವಸ್ಥೆಯನ್ನು ತಲುಪಿ ಬುದ್ಧಾತೀತ ಸ್ಥಿತಿಯನ್ನು ದಾಟುವ ಸಲಹೆ ನೀಡುತ್ತಾಳೆ:

If one abandons oneself

and seeks externally,

even if one practices for ten million cows,

he will have no obtainment.

Seek nothing, undertake nothing,

remain freely in the nature of essential reality.

 

Not having any hope is the supreme practice

of cutting off the demons.

Without the limitation of human hopes and fears,

if one cuts the rope of attachment,

where is the Buddha, in reality?

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.