MENU

ದಾದಾಗಿರಿಯ ದಿನಗಳು

ದಾದಾಗಿರಿಯ ದಿನಗಳು

June 27, 2018 ಅಗ್ನಿ ಶ್ರೀಧರ್ ಕಾಲಂ, ಅಧ್ಯಾತ್ಮ, ಒಳಗೂ ಬಯಲು ಹೊರಗೂ ಬಯಲು, ಧಾರಾವಾಹಿ, ಪ್ರಚಲಿತ, ಯುವಜನ

ಒಳಗೂ ಬಯಲು ಹೊರಗೂ ಬಯಲು

ಭೀಕರ ದೆವ್ವ: ಅಹಂ – 1

ನ್ನನ್ನು ತಾನು ಹೊರತುಪಡಿಸಿಕೊಂಡು ಹತ್ತು ಲಕ್ಷ ವರ್ಷಗಳ ಕಾಲ ಸಾಧನೆ ಎಸಗಿದರೂ ಏನೂ ಪ್ರಯೋಜನವಾಗುವುದಿಲ್ಲವೆನ್ನುತ್ತಾಳೆಮಾಚಿಗ್. ಅಂದರೆ, ತನ್ನ ಆಂತರ್ಯವನ್ನು ಒಳಗೊಳ್ಳದೆ ಕೇವಲ ಬಾಹ್ಯ ಆಚರಣೆಗಳಿಂದ ಸಿದ್ಧಿ ದೊರಕುವುದಿಲ್ಲ. ಅದೊಂದು ರೀತಿ ವೈದಿಕರ ಯಜ್ಞಗಳ ಹಾಗೆ. ತೋರಿಕೆಯ, ಆಡಂಬರದ ಆಚರಣೆಗಳು ಆಂತರ್ಯದ ನಡಿಗೆಗೆ ನೆರವಾಗುವುದಿಲ್ಲ. ಏನನ್ನೂ ಬಯಸದೆ, ಯಾವ ಆಚರಣೆಯಲ್ಲೂ ತೊಡಗದೆ, ವಾಸ್ತವದ ಮೂಸೆಯಲ್ಲಿ ಸ್ವತಂತ್ರವಾಗಿ ಸಾಗಿದರೆ ಸಾಕು. ದೆವ್ವಗಳನ್ನು ಹತ್ತಿಕ್ಕುವುದರಲ್ಲಿ ಅತೀ ಮುಖ್ಯವಾದದ್ದು ಏನು ಗೊತ್ತೆ? ಯಾವುದೆ ರೀತಿಯ ಬಯಕೆಗೂ ಒಳಗಾಗದಿರುವುದು. Not having any hope is the supreme practice of cutting off the demons ಎನ್ನುತ್ತಾಳೆ ಮಾಚಿಗ್. ಅದನ್ನೆ ಒಂದು ಕಡೆ ನಮ್ಮ ಸಿದ್ಧರಾಮ ಹೇಳುವುದು ನಿಮಗೆ ನೆನಪಿರಬಹುದು: ‘ಆಸೆಯಿಲ್ಲದುದೆ ಅನಾಹತ’. ಮನದ ಮುಂದಿನ ಆಸೆಯನ್ನು ‘ಮಾಯೆ’ ಎನ್ನುತ್ತಾನೆ ಅಲ್ಲಮ. ಆ ಆಸೆಯೆ ನಮ್ಮ ಆಂತರ್ಯದ ನಡಿಗೆಗೆ ಇನ್ನಿಲ್ಲದ ತಡೆಯನ್ನು ಒಡ್ಡುವುದು. ನಮ್ಮೊಳಗಿನ ಭೀತಿ ಮತ್ತು ಆಸೆಗಳನ್ನು ಧ್ವಂಸಗೊಳಿಸಿದ ನಂತರ ಬುದ್ಧನನ್ನು ಹುಡುಕಾಡುವ ಅಗತ್ಯವೆ ಉಳಿಯುವುದಿಲ್ಲ. ಕಾರಣ, ನಾವೆ ‘ಬುದ್ಧ’ರಾಗಿಬಿಟ್ಟಿರುತ್ತೇವೆ! ಸಂಪೂರ್ಣವಾಗಿ ಆಸೆ-ಭೀತಿಗಳಿಂದ ಕಳಚಿಕೊಳ್ಳುವುದೆ ಬುದ್ಧತ್ವ. ಅವೆರಡೂ ಒಂದಕ್ಕೊಂದು ಭಿನ್ನವಾದ ಅಂಶಗಳಲ್ಲ; ಪೂರಕಗಳು.
ನಂತರ ಅಹಂನ ದೆವ್ವವನ್ನು ವಿವರಿಸುತ್ತಾಳೆ ಮಾಚಿಗ್:

Although they are divided into four categories,

all demons are included in the demons of pride.

Just as the lion on the high snowy peaks has no fear,

if one eliminates ego-clinging,

confidence will develop

and one will fluctuate

between the gods and evil spirit of existence.

Even if hundreds of them rise up

the doctrines will shine upon them.

If they can be recognised as one’s own projection

one will proceed with great dexterity

Eliminating the flow of thoughts

and not undertaking any meditation,

it is sufficient to obtain a profound insight of inner wisdom

that bursts out strong and spontaneous like an epidemic.

This practice of severing the demons

which arises from the profound insight

that there is no root

is the supreme teaching of all!

ಅಹಂ, ಸ್ವಪ್ರತಿಷ್ಠೆ ಎನ್ನುವ ದೆವ್ವ ಇತರ ಎಲ್ಲ ದೆವ್ವಗಳ ಮೊತ್ತವೆನ್ನುತ್ತಾಳೆ ಮಾಚಿಗ್. ಈ ದೆವ್ವ ನಿತ್ಯ ನಮ್ಮನ್ನೆಷ್ಟು ಬಾರಿ ಕಾಡಬಹುದು? ಹೊರಗಿನ ವ್ಯವಹಾರಗಳಲ್ಲಿರಲಿ, ಆಂತರ್ಯದಲ್ಲಿ ನಮ್ಮನ್ನು ಎಷ್ಟು ಕಂಗೆಡಿಸಬಹುದು? ಅತ್ಯಂತ ಸರಳ ನಿದರ್ಶನವನ್ನು ನೀಡುತ್ತೇನೆ. ಕಳೆದ ರಾತ್ರಿ ನನ್ನ ಈ ಬಯಲ ಲೇಖನಗಳನ್ನು ಅಪಾರವಾಗಿ ಇಷ್ಟಪಡುವ ಒಬ್ಬ ಯುವ ಬರಹಗಾರ, ‘ಮಾಚಿಗ್’ ಎನ್ನುವುದಕ್ಕೆ ಖಚಿತವಾದ ಉಚ್ಚಾರವನ್ನು ಇಂಟರ್‍ನೆಟ್‍ನಲ್ಲಿ ಕಂಡುಹಿಡಿದಿರುವುದಾಗಿ ಹೇಳಿ, ಅದು ‘ಮಾಹ್‍ಚಿಗ್’ ಎಂದು ಹೇಳಿ, ಇಂದು ನೆಟ್ ಎಷ್ಟು ಮುಂದುವರೆದಿದೆಯೆಂದರೆ, ಅದರಲ್ಲಿ ಉಚ್ಚಾರಣೆಯನ್ನು ಕೇವಲ ಪದಗಳ ಮೂಲಕ ಮಾತ್ರ ವಿವರಿಸದೆ, ಧ್ವನಿಯಲ್ಲಿಯೂ ಬಿತ್ತರಿಸುವ ವ್ಯವಸ್ಥೆಯಿದೆಯೆಂದ. ನಾನು ಅಚ್ಚರಿಯನ್ನು ವ್ಯಕ್ತಪಡಿಸುವುದರ ಜೊತೆಗೆ, ಉಚ್ಚಾರಣೆ ಕುರಿತಂತೆ ನೆಟ್ ಬಳಸುವ ಅಗತ್ಯ ನನಗೆ ಕಂಡಿಲ್ಲವೆಂದೆ. ಆತ ‘…ನಿಮ್ಮ ಲೇಖನಗಳಲ್ಲಿ ಒಂದೇ ಒಂದೂ ಅಂತಹ ತಪ್ಪು ಕಾಣುವುದು ನನಗೆ ಇಷ್ಟವಾಗುವುದಿಲ್ಲ ಸಾರ್…’ ಎಂದ. ನನಗೆ ಇನ್ನಿಲ್ಲದ ಸಿಟ್ಟು ಉಕ್ಕಿ ಬಂತು. ಬ್ರಾಹ್ಮಣ ಜಾತಿಗೆ ಸೇರಿದ ಅವನದು brahmin arrogance  ಎಂದು ರೇಗಿದೆ. ನಾನು ಹೇಳುವ ವಿಷಯಗಳು, contents ಮುಖ್ಯವಾಗಿರಬೇಕೆ ಹೊರತು ಉಚ್ಚಾರಣೆ, ವ್ಯಾಕರಣಗಳಲ್ಲವೆಂದೆ. ಆತ ತಣ್ಣಗಾಗಿಬಿಟ್ಟ. ನಾನು ಫೋನ್ ಕಟ್ ಮಾಡಿದೆ. ಸ್ವಲ್ಪ ಹೊತ್ತಿನ ನಂತರ ಆತನಿಂದ ಸಂದೇಶ: ‘…ಸಾರ್… ನೀವೇಕೆ ಹಾಗೆ ಸಿಟ್ಟು ಮಾಡಿಕೊಂಡಿರಿ… ನಾನು ನಿಮ್ಮನ್ನು ಆರಾಧಿಸುತ್ತೇನೆಂದು ನಿಮಗೆ ತಿಳಿದಿಲ್ಲವೆ…? ನಾವು ಆರಾಧಿಸುವವರು ತಪ್ಪೆ ಎಸಗಬಾರದೆಂದು ನಾವು ಬಯಸುವುದು ತಪ್ಪೆ…? ನಿಮ್ಮನ್ನು ಎಷ್ಟು ಬಾರಿ ಪ್ರಶಂಸಿಸಿದ್ದೇನೆ? ಆಗ brahminic ಆಗಿ ಕಾಣದ ನಾನು ಈಗೇಕೆ brahminic ಆದೆ…?’ ನನಗೆ ತೀರ ಮುಜುಗರವೆನಿಸಿಬಿಟ್ಟಿತು. ನನ್ನ ಲೇಖನಗಳಿಗೆ ಪ್ರಥಮವಾಗಿ ಪ್ರತಿಕ್ರಿಯಿಸುವ ಯುವಕ ಆತ. ಹಲವು ಬಾರಿ ಎಷ್ಟರಮಟ್ಟಿಗೆ ಪ್ರಶಂಸಿಸುತ್ತಾನೆಂದರೆ ಕನ್ನಡ ಭಾಷೆ ನನಗೆ ಕೃತಜ್ಞವಾಗಿರಬೇಕೆನ್ನುವಷ್ಟು! ಮತ್ತು ನಾನು ಯಾವುದೆ ಕಾರಣದಿಂದಲಾದರೂ ಬಯಲು ಅಂಕಣ ಬರೆಯದಿದ್ದರೆ, ‘…ಈ ವಾರ ನನಗೆ ಮಹತ್ತರವಾದ ಏನನ್ನೊ ನಾನು ಕಳೆದುಕೊಂಡಿರುವ ಹಾಗಾಗುತ್ತಿದೆ…’ ಎಂದು ಹೇಳುವುದರ ಮೂಲಕ ನನ್ನನ್ನು ಅಪಾರವಾಗಿ ಉತ್ತೇಜಿಸುತ್ತಿರುತ್ತಾನೆ. ನಂತರದಲ್ಲಿ ನಾನು ಆತನೊಡನೆ ಇಪ್ಪತ್ತು ನಿಮಿಷ ಮಾತನಾಡಿ ಆತನನ್ನು ಹಗುರಗೊಳಿಸಿದೆ. ಆದರೆ ನನ್ನ ಮನಸ್ಸು ಬೆಳಗಿನವರೆಗೂ ಹಗುರವಾಗಲಿಲ್ಲ.

(ಮುಂದುವರೆಯುವುದು)

Tags: , , , , , , , , , , , , , , , , , , , , , , , , , , , , , , , , , , , ,

Tweet about this on Twitter Share on Facebook Share on Google+ Pin on Pinterest Share on LinkedIn Buffer this page Share on Reddit Share on StumbleUpon Share on Tumblr Email this to someone Print this page

Comments are closed.